ಹೀರೋ ಮೋಟೋಕಾರ್ಪ್ ಕಚೇರಿ ಮೇಲೆ ಐಟಿ ದಾಳಿ !

Prasthutha|

ಚಂಡೀಗಢ: ಹೀರೋ ಮೋಟೋಕಾರ್ಪ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪವನ್ ಮುಂಜಾಲ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

- Advertisement -

ಪವನ್ ಮುಂಜಾಲ್ ಅವರ ಗುರುಗ್ರಾಮದಲ್ಲಿರುವ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿದೆ. ಐಟಿ ಅಧಿಕಾರಿಗಳು ಕಂಪನಿಗೆ ಸಂಬಂಧಿಸಿದ ದಾಖಲೆಗಳ ಹುಡುಕಾಟ ನಡೆಸುತ್ತಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ. 

ಪವನ್ ಮುಂಜಾಲ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೋ ಮೋಟೋಕಾರ್ಪ್ ನ ಅಧ್ಯಕ್ಷರಾಗಿದ್ದು ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕ ಹಾಗೂ ಮಧ್ಯ ಅಮೆರಿಕದ 40 ದೇಶಗಳಲ್ಲಿ ವಹಿವಾಟು ನಡೆಸುತ್ತಿದ್ದಾರೆ. 

Join Whatsapp