ಜಿನಿವಾ: ಡೆಲ್ಟಾ ಸೇರಿದಂತೆ ಬೇರೆ ರೂಪಾಂತರ ಮಾದರಿಗಳಿಗೆ ಹೋಲಿಸಿದರೆ ಹೊಸದಾಗಿ ಪತ್ತೆಯಾಗಿರುವ ಕೊರೊನಾ ರೂಪಾಂತರ ತಳಿ ಓಮ್ರಿಕಾನ್ ಹೆಚ್ಚು ಅಪಾಯಕಾರಿಯೇ ಅಥವಾ ರೋಗದ ತೀವ್ರತೆ ಹೆಚ್ಚಿಸುತ್ತದೆಯೇ ಎನ್ನುವ ವಿಚಾರ ಸ್ಪಷ್ಟವಾಗಿಲ್ಲ” ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
“ಬೇರೆ ರೂಪಾಂತರ ತಳಿಗಳಿಗೆ ಹೋಲಿಕೆ ಮಾಡಿದಲ್ಲಿ ಓಮ್ರಿಕಾನ್ ರೋಗಲಕ್ಷಣ ಭಿನ್ನ ಎನ್ನುವ ಕುರಿತು ಸದ್ಯ ಯಾವುದೇ ಮಾಹಿತಿ ಇಲ್ಲ” ಎಂದಿದೆ.”ವಿಶ್ವವಿದ್ಯಾಲಯಗಳಲ್ಲಿ ಪ್ರಾಥಮಿಕ ಅಧ್ಯಯನಗಳಲ್ಲಿ ಸೋಂಕಿಗೆ ಒಳಗಾದ ಯುವಕರಲ್ಲಿ ರೋಗಲಕ್ಷಣ ಸಾಧಾರಣವಾಗಿರುತ್ತದೆ. ಓಮ್ರಿಕಾನ್ ಗಂಭೀರತೆಯ ಕುರಿತು ತಿಳಿಯಲು ಹಲವು ವಾರಗಳು ಬೇಕಾಗುತ್ತದೆ” ಎಂದು ತಿಳಿಸಿದೆ.”ಇದು ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ ಹಾಗೂ ಪರೀಕ್ಷೆಗಳ ಮೇಲೆ ಯಾವುದೇ ಪರಿಣಾಮವಿದೆಯೇ ಎಂದು ನಿರ್ಧರಿಸಲು ಅಧ್ಯಯನಗಳು ನಡೆಯುತ್ತಿವೆ” ಎಂದು ಹೇಳಿದೆ.
“ದಕ್ಷಿಣ ಆಫ್ರಿಕಾದಲ್ಲಿ ಹಲವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಓಮ್ರಿಕಾನ್ನಿಂದಲೇ ಇದು ಆಗುತ್ತಿದೆಯೇ ಎನ್ನುವುದನ್ನು ಪತ್ತೆಹಚ್ಚುವಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ನಿರತರಾಗಿದ್ದಾರೆ” ಎಂದು ಡಬ್ಲ್ಯುಹೆಚ್ಒ ತಿಳಿಸಿದೆ.ಈ ಕುರಿತು ಡಬ್ಲ್ಯುಹೆಚ್ಒ ಮುಖ್ಯಸ್ಥ ಟೆಡ್ರೋಸ್ ಅಡಾನೊಮ್ ಗೆಬ್ರೆಯೆಸಸ್ ಮಾಹಿತಿ ನೀಡಿದ್ದು, “ಎಲ್ಲರಿಗೂ ಲಸಿಕೆ ವಿತರಣೆಗೆ ನಾವು ಹೆಚ್ಚು ಸಮಯ ತೆಗೆದುಕೊಂಡಷ್ಟು ದಿನ ವೈರಸ್ ಹರಡುವಿಕೆ ರೂಪಾಂತರ ಹಾಗೂ ಇನ್ನಷ್ಟು ಅಪಾಯಕಾರಿಯಾಗುತ್ತದೆ” ಎಂದಿದ್ದಾರೆ.