ಕಮಲ ಹಾಸನ್ ಪಕ್ಷದ ಖಜಾಂಜಿ ಮನೆ ಮೇಲೆ ಐಟಿ ದಾಳಿ | 11.56 ಕೋಟಿ ವಶ
Prasthutha: March 19, 2021

ಕೊಯಿಂಬತ್ತೂರು : ಚಿತ್ರನಟ ಕಮಲ ಹಾಸನ್ ಅವರ ಎಮ್ ಎನ್ ಎಮ್ ಪಕ್ಷದ ಖಜಾಂಚಿ ಚಂದ್ರಶೇಖರ್ ಅವರ ಮನೆಗೆ ದಾಳಿ ನಡೆಸಿದೆ.
ಈ ದಾಳಿಯಲ್ಲಿ ಸುಮಾರು 11.56 ಕೋಟಿ ಅಕ್ರಮ ಹಣ ಪತ್ತೆಯಾಗಿದೆ ಎನ್ನಲಾಗಿದೆ. ಮಧುರೈ ಮತ್ತು ತಿರುಪ್ಪುರ್ ಗಳಲ್ಲೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಚಂದ್ರಶೇಖರ್ ರವರ ಆದಾಯಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಚಂದ್ರಶೇಖರ್ ಅವರ ಮನೆಗೆ ಇಂದು ದಾಳಿ ನಡೆಸಿದ ಐಟಿ ಇಲಾಖೆಯವರು ಕಳೆದ ಒಂದು ವಾರದಿಂದ ತಮಿಳುನಾಡಿನ ಹಲವು ಭಾಗಗಳಲ್ಲಿ ದಾಳಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
