ಇಸ್ರೇಲ್ ಸಂಸತ್ತು ವಿಸರ್ಜನೆ: 4 ವರ್ಷಗಳಲ್ಲಿ 5ನೇ ಚುನಾವಣೆ!

Prasthutha|

ಜೆರುಸಲೇಂ: ಇಸ್ರೇಲ್‌ ಸಂಸತ್ತನ್ನು ವಿಸರ್ಜಿಸಲಾಗಿದ್ದು ನಾಲ್ಕು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಐದನೇ ಬಾರಿಗೆ ಇಸ್ರೇಲ್ ಚುನಾವಣೆಗೆ ಸಜ್ಜಾಗಿದೆ .

- Advertisement -

ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಯಾಯಿರ್‌ ಲಪಿದ್‌ ಅವರು ಹಂಗಾಮಿ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.ಈ ಹುದ್ದೆಗೇರಿದ 14ನೇ ವ್ಯಕ್ತಿ ಅವರಾಗಿದ್ದಾರೆ.
ಸಾರ್ವತ್ರಿಕ ಚುನಾವಣೆಯು ನವೆಂಬರ್‌ 1ರಂದು ನಿಗದಿಯಾಗಿದೆ. ಇಸ್ರೇಲ್‌ನಲ್ಲಿ ಹಿಂದಿನ 4 ವರ್ಷಗಳಲ್ಲಿ ನಡೆಯುತ್ತಿರುವ 5ನೇ ಚುನಾವಣೆ ಇದಾಗಿದೆ.

ಇಸ್ರೇಲ್ ನ ಅತ್ಯಂತ ಕಡಿಮೆ ಅವಧಿಯ ಪ್ರಧಾನಿ ನಫ್ತಾಲಿ ಬೆನೆಟ್ ಅವರಿಂದ ಅಧಿಕಾರ ವಹಿಸಿಕೊಂಡ 14ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ವಿದೇಶಾಂಗ ಸಚಿವರಾಗಿದ್ದ ಯಾಯಿರ್‌ ಲಪಿದ್‌ ಅವರು ಅವರು ಪಾತ್ರರಾಗಲಿದ್ದಾರೆ.



Join Whatsapp