ಬೊಮ್ಮನಹಳ್ಳಿ ಬಾಬು ಜೆಡಿಎಸ್ ಪಕ್ಷ ಸೇರ್ಪಡೆ

Prasthutha|

ಬೆಂಗಳೂರು: ಜಾತ್ಯತೀತ ಜನತಾ ದಳದ ರಾಜ್ಯ ಕಚೇರಿ  ಜೆ.ಪಿ.ಭವನದಲ್ಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಆಟಿಕಾ ಗೋಲ್ಡ್ ಬಾಬು (ಬೊಮ್ಮನಹಳ್ಳಿ ಬಾಬು) ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

- Advertisement -

ಕುಮಾರಸ್ವಾಮಿ ಅವರು ಹಾಗೂ ಶಾಸಕರಾದ ಗೌರಿ ಶಂಕರ್, ಮಂಜುನಾಥ್, ನಗರ ಜೆಡಿಎಸ್ ಅಧ್ಯಕ್ಷ ಆರ್ ಪ್ರಕಾಶ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ ಮುಂತಾದವರು ಪಕ್ಷದ ಬಾವುಟ ನೀಡುವ ಮೂಲಕ ಬಾಬು ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಆಟಿಕಾ ಬಾಬು ಮಾತನಾಡಿ, ನಾಡಿನ ನೆಲ, ಜಲ ಭಾಷೆ ನಾಡು, ನುಡಿಗೆ ಹಿತ ಕಾಯುವ ಮತ್ತು ರಕ್ಷಣೆಗೆ, ಸಾಮಾಜಿಕ ಸಮಾನತೆ ಮತ್ತು ಜಾತ್ಯತೀತ ಸಿದ್ದಾಂತವನ್ನು ಸಂಪೂರ್ಣ ಸುರಕ್ಷತೆ, ರಕ್ಷಣೆ ಮಾಡುತ್ತಿರುವ ಜಾತ್ಯತೀತ ಜನತಾ ದಳ ಪಕ್ಷ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆಶೀರ್ವಾದದೊಂದಿಗೆ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರ ಕೈಬಲಪಡಿಸಲು ನಾನು ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. 28 ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಬ್ಬ ನಾಗರಿಕರ ಮನೆ ಭೇಟಿ ಮಾಡಲು ಜನತಾ ಮಿತ್ರ ಅಂದೋಲನ ನಾಳೆಯಿಂದ ಪ್ರಾರಂಭವಾಗುತ್ತಿದೆ ಎಂದರು.

Join Whatsapp