ಆರೋಗ್ಯ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸಲು ಇಸ್ರೇಲ್, UAE ಒಪ್ಪಂದ

Prasthutha: July 3, 2021

ಅಬುಧಾಬಿ: ಆರೋಗ್ಯ ಕ್ಷೇತ್ರದಲ್ಲಿ ಯುಎಇ ಮತ್ತು ಇಸ್ರೇಲ್ ನಡುವೆ ಸಹಕಾರವನ್ನು ಬಲಪಡಿಸಲು ಮತ್ತು ಉಭಯ ರಾಷ್ಟ್ರಗಳ ಕಾರ್ಯ ಚಟುವಟಿಕೆಗಳನ್ನು ಉತ್ತೇಜಿಸಲು ಅಬುಧಾಬಿ ಆರೋಗ್ಯ ಸಚಿವಾಲಯವು ಇಸ್ರೇಲ್ ನ ಅತಿದೊಡ್ಡ ಆರೋಗ್ಯ ಸೇವೆ ಒದಗಿಸುವ ಸಂಸ್ಥೆ ಕ್ಲಾಲಿಟ್ ಹೆಲ್ತ್ ಸರ್ವೀಸಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಅಬುಧಾಬಿ ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಡಾ. ಜಮಾಲ್ ಮೊಹಮ್ಮದ್ ಅಲ್ ಕಾಬಿ ಮತ್ತು ಕ್ಲಾಲಿಟ್ ಹೆಲ್ತ್ ಸರ್ವೀಸಸ್ ಕಾರ್ಯನಿರ್ವಾಹಕ ನಿರ್ದೇಶಕ ಓಹಾದ್ ಡೋಡ್ಸನ್ ಒಪ್ಪಂದ ಪತ್ರಕ್ಕೆ ಸಹಿ ಮಾಡಿದ್ದಾರೆ.

ಡಿಜಿಟಲ್ ಹೆಲ್ತ್,  ವಿಸಿಟಿಂಗ್ ಫಿಸಿಷ್ಯನ್ ಪ್ರೋಗ್ರಾಂ, ವೈದ್ಯಕೀಯ ಶಿಕ್ಷಣ, ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರೋಗಿಗಳ ಉಲ್ಲೇಖಗಳು, ಸಂಶೋಧನೆ ಮತ್ತು ವೈದ್ಯಕೀಯ ಸೇವೆ ಬಗ್ಗೆ ಸಹಕರಿಸುವ ನಿರ್ಧಾರವನ್ನು ಒಪ್ಪಂದ ಪತ್ರವು ಸ್ಪಷ್ಟಪಡಿಸುತ್ತದೆ.

ಅಬುಧಾಬಿ ಆರೋಗ್ಯ ಇಲಾಖೆಯ ಚೇರ್ಮೆನ್ ಶೇಖ್ ಅಬ್ದುಲ್ಲಾ ಬಿನ್ ಮೊಹಮ್ಮದ್ ಅಲ್ ಹಮೀದ್, ಯುಎಇಯ ಇಸ್ರೇಲ್ ರಾಯಭಾರಿ ಎಥಾನ್ ನಹೆ ಮತ್ತು ನ್ಯಾಷನಲ್ ಹೆಲ್ತ್ ಇನ್ಶೂರೆನ್ಸ್ ಕಂಪನಿ ದಮನ್ ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಹಮದ್ ಅಬ್ದುಲ್ಲಾ ಅಲ್ ಮಹಿಯಾಸ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ