ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಇರ್ವತ್ತೂರು ಗ್ರಾಮ ಸಮಿತಿ ವತಿಯಿಂದ ಗ್ರಾಮದ ವಿವಿದೆಡೆ ಸ್ಯಾನಿಟೈಝೇಸನ್ ಮತ್ತು ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ನೇರಳಕಟ್ಟೆಯ ಅಂಗನವಾಡಿ ಕೇಂದ್ರ, ಸಾರ್ವಜನಿಕ ಬಸ್ಸು ತಂಗುದಾಣ, ಜಂಕ್ಷನ್ ಪ್ರದೇಶ ಕಲಾಬಾಗಿಲಿನ ಅಂಗನವಾಡಿ ಕೇಂದ್ರ, ಖಮರುಲ್ ಇಸ್ಲಾಂ ಮದರಸ ಮತ್ತು ಮಸೀದಿ, ಅಂಗನವಾಡಿ ಕೇಂದ್ರ ಇರ್ವತ್ತೂರು ಬೀಡು, ಇರ್ವತ್ತೂರು ಪದವಿನ ಸಾರ್ವಜನಿಕ ಬಸ್ಸು ತಂಗುದಾಣ,ಅಂಗಡಿ ಮತ್ತು ಜಂಕ್ಷನ್ ಪ್ರದೇಶ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೂರ್ಜೆಯ ನೂರುಲ್ ಹುದಾ ಮದರಸ ಮತ್ತು ಮಸೀದಿ, ಸಾರ್ವಜನಿಕ ಬಸ್ಸು ತಂಗುದಾಣ,ರಿಕ್ಷಾ ಪಾರ್ಕಿಂಗ್, ಅಂಗಡಿ ಮತ್ತು ಜಂಕ್ಷನ್ ಪ್ರದೇಶ, ದೈಕಿನಕಟ್ಟೆಯ ಪೆಟ್ರೋಲ್ ಪಂಪ್, ಸಾರ್ವಜನಿಕ ಬಸ್ಸು ತಂಗುದಾಣ,ರಿಕ್ಷಾ ಪಾರ್ಕಿಂಗ್, ಅಂಗಡಿ ಮತ್ತು ಜಂಕ್ಷನ್ ಪ್ರದೇಶದಲ್ಲಿ ಸ್ಯಾನಿಟೈಝರ್ ಸಿಂಪಡಿಸಲಾಯಿತು.
ಈ ಸಂದರ್ಭದಲ್ಲಿ ನೇರಳಕಟ್ಟೆ,ಕಲಾಬಾಗಿಲು ಮತ್ತು ಇರ್ವತ್ತೂರು ಬೀಡು ಅಂಗನವಾಡಿ ಕೇಂದ್ರದ ಶಿಕ್ಷಕಿಯರು, ದ.ಕ.ಜಿ.ಹಿ.ಪ್ರಾ.ಶಾಲೆ ಇರ್ವತ್ತೂರು ಪದವು ಶಾಲೆಯ ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ,ಅನಿವಾಸಿ ದುಬೈ ಕನ್ನಡಿಗರು ಸಂಘದ ವಕ್ತಾರರಾದ ಫಿರೋಝ್ NRF, ಕಲಾಬಾಗಿಲಿನ ಹಿರಿಯರಾದ ಹುಸೈನ್ ಸಾಹೇಬ್, ಪಕ್ಷದ ಪ್ರಮುಖರಾದ ರಶೀದ್ ಮೂರ್ಜೆ,ಹಫೀಝ್ ಮೂರ್ಜೆ,ರಿಯಾಝ್ ಬಸ್ತಿಕೋಡಿ, ಅಝರ್ ಪಂಜೋಡಿ,ನಕಾಶ್ ಬಾಂಬಿಲ,ಅಶ್ರಫ್ ಬಾಂಬಿಲ ,ಫೈರೋಝ್ ಮೂರ್ಜೆ ಮತ್ತು SDPi ಕಾರ್ಯಕರ್ತರು ಉಪಸ್ಥಿತರಿದ್ದರು.