ಶೀಘ್ರದಲ್ಲೇ ಫೆಲೆಸ್ತೀನ್ ಗೆ 10ಲಕ್ಷ ಡೋಸ್ ಕೋವಿಡ್ ಲಸಿಕೆ : ಇಸ್ರೇಲ್

Prasthutha|

ಜೆರುಸಲೇಮ್: ಶೀಘ್ರದಲ್ಲೇ 10 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ಫೆಲೆಸ್ತೀನ್ ಗೆ ತಲುಪಿಸುವುದಾಗಿ ಇಸ್ರೇಲ್ ಘೋಷಿಸಿದೆ. ಭಾನುವಾರ ಪ್ರಮಾಣವಚನ ಸ್ವೀಕರಿಸಿದ ನಫ್ತಾಲಿ ಬೆನೆಟ್ ನೇತೃತ್ವದ ಇಸ್ರೇಲ್ ನ ಹೊಸ ಸರ್ಕಾರ ಫೆಲೆಸ್ತೀನಿಯನ್ನರಿಗೆ ಲಸಿಕೆ ನೀಡುವುದಾಗಿ ಘೋಷಿಸಿದೆ.

- Advertisement -

ವಿಶ್ವಸಂಸ್ಥೆಯ ಯೋಜನೆಯಲ್ಲಿ ಫೆಲೆಸ್ತೀನ್ ಗೆ ಲಸಿಕೆ ಲಭಿಸಿದಾಗ ಇಸ್ರೇಲ್ ಗೆ ಅದನ್ನು ಹಿಂದಿರುಗಿಸಬೇಕೆಂಬ ಷರತ್ತಿನೊಂದಿಗೆ ಫೈಝರ್ ಲಸಿಕೆ ಹಸ್ತಾಂತರಿಸಲಾಗುವುದು. ಫೆಲೆಸ್ತೀನ್ ಇಸ್ರೇಲ್ ಆಕ್ರಮಿತ ಪ್ರದೇಶವಾಗಿರುವುದರಿಂದ ಲಸಿಕೆ ನೀಡಲು ಕೆಲವು ಮಾನವ ಹಕ್ಕುಗಳ ಸಂಘಟನೆಗಳು ಇಸ್ರೇಲ್ ಗೆ ಈ ಹಿಂದೆ ಸೂಚಿಸಿತ್ತು.

Join Whatsapp