ಜೆರುಸಲೇಮ್: ಶೀಘ್ರದಲ್ಲೇ 10 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ಫೆಲೆಸ್ತೀನ್ ಗೆ ತಲುಪಿಸುವುದಾಗಿ ಇಸ್ರೇಲ್ ಘೋಷಿಸಿದೆ. ಭಾನುವಾರ ಪ್ರಮಾಣವಚನ ಸ್ವೀಕರಿಸಿದ ನಫ್ತಾಲಿ ಬೆನೆಟ್ ನೇತೃತ್ವದ ಇಸ್ರೇಲ್ ನ ಹೊಸ ಸರ್ಕಾರ ಫೆಲೆಸ್ತೀನಿಯನ್ನರಿಗೆ ಲಸಿಕೆ ನೀಡುವುದಾಗಿ ಘೋಷಿಸಿದೆ.
ವಿಶ್ವಸಂಸ್ಥೆಯ ಯೋಜನೆಯಲ್ಲಿ ಫೆಲೆಸ್ತೀನ್ ಗೆ ಲಸಿಕೆ ಲಭಿಸಿದಾಗ ಇಸ್ರೇಲ್ ಗೆ ಅದನ್ನು ಹಿಂದಿರುಗಿಸಬೇಕೆಂಬ ಷರತ್ತಿನೊಂದಿಗೆ ಫೈಝರ್ ಲಸಿಕೆ ಹಸ್ತಾಂತರಿಸಲಾಗುವುದು. ಫೆಲೆಸ್ತೀನ್ ಇಸ್ರೇಲ್ ಆಕ್ರಮಿತ ಪ್ರದೇಶವಾಗಿರುವುದರಿಂದ ಲಸಿಕೆ ನೀಡಲು ಕೆಲವು ಮಾನವ ಹಕ್ಕುಗಳ ಸಂಘಟನೆಗಳು ಇಸ್ರೇಲ್ ಗೆ ಈ ಹಿಂದೆ ಸೂಚಿಸಿತ್ತು.