ಮತ್ತಿಬ್ಬರು ಒತ್ತೆಯಾಳುಗಳನ್ನು ಸ್ವೀಕರಿಸಲು ಇಸ್ರೇಲ್ ನಿರಾಕರಿಸಿದೆ: ಹಮಾಸ್‌

Prasthutha|

ಮತ್ತಿಬ್ಬರು ಒತ್ತೆಯಾಳುಗಳನ್ನು ಸ್ವೀಕರಿಸಲು ಇಸ್ರೇಲ್ ನಿರಾಕರಿಸಿದೆ: ಹಮಾಸ್‌

- Advertisement -

ಗಾಝಾ: ಇಬ್ಬರು ಅಮೆರಿಕನ್‌ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಗೊಳಿಸಿತ್ತು. ಅವರ ಜೊತೆಗೆ ಇನ್ನೂ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌ ಉದ್ದೇಶಿಸಿದ್ದರೂ ಅವರನ್ನು ಸ್ವೀಕರಿಸಲು ಇಸ್ರೇಲ್‌ ನಿರಾಕರಿಸಿತ್ತು ಎಂದು ಹಮಾಸ್‌ನ ಸಶಸ್ತ್ರ ಪಡೆಯ ವಕ್ತಾರ ಅಬು ಉಬೈದಾ ತಿಳಿಸಿದ್ದಾರೆ.

ಅಮೆರಿಕನ್ ಪ್ರಜೆಗಳಾದ ಜುಡಿತ್‌ ಮತ್ತು ಅವರ ಮಗಳು ನತಾಲಿಯನ್ನು ಬಿಡುಗಡೆ ಮಾಡಿದ ದಿನವೇ ಮತ್ತಿಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ನಿರ್ಧರಿಸಿತ್ತು. ಈ ನಿರ್ಧಾರವನ್ನು ಕತಾರ್‌ಗೂ ತಿಳಿಸಲಾಗಿತ್ತು. ಆದರೆ ಇಸ್ರೇಲ್‌ ಸಮ್ಮತಿಸಿರಲಿಲ್ಲ ಎಂದು ಅಬೂ ಉಬೈದಾ ತಿಳಿಸಿದ್ದಾರೆ.

- Advertisement -

ಮಾನವೀಯ ನೆಲೆಯಲ್ಲಿ ರವಿವಾರ ಇನ್ನಿಬ್ಬರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಹಮಾಸ್‌ ಸಿದ್ದವಾಗಿದೆ ಎಂದು ಮತ್ತೊಂದು ಹೇಳಿಕೆಯಲ್ಲಿ ಅಬೂ ಉಬೈದಾ ತಿಳಿಸಿದ್ದಾರೆ.

ಈ ಹೇಳಿಕೆಗಳನ್ನು ‘ಅಜೆಂಡಾ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕರೆದಿದ್ದಾರೆ ಎಂದು ಸುದ್ದಿಯಾಗಿದೆ.

Join Whatsapp