ನವೆಂಬರ್ 1ರಿಂದ ಡೀಸೆಲ್ ಬಸ್ಗಳಿಗೆ ನಿಷೇಧ!

Prasthutha|

ನವದೆಹಲಿ: ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಮಾಲಿನ್ಯವು ಅತಿ ಹೆಚ್ಚಿರುತ್ತದೆ. ಇದನ್ನು ತಡೆಯಲು ಕಾರ್ಖಾನೆಗಳನ್ನು ಮುಚ್ಚುವುದು, ಸಮ-ಬೆಸ ರೀತಿಯಲ್ಲಿ ವಾಹನಗಳನ್ನು ರಸ್ತೆಗಿಳಿಸುವುದು, ಹೆಚ್ಚು ಮಾಲಿನ್ಯವನ್ನು ಹೊರಸೂಸುವ ವಾಹನಗಳನ್ನು ನಿಷೇಧಿಸುವುದು, ಪಟಾಕಿ ಸಿಡಿಸದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಜೊತೆಗೆ ನವೆಂಬರ್ 1 ರಿಂದ ರಾಷ್ಟ್ರ ರಾಜಧಾನಿ ದೆಹಲಿಯೊಳಗೆ ಡೀಸೆಲ್ ಬಸ್ಸುಗಳ ಸಂಚಾರವನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

- Advertisement -

ನವೆಂಬರ್ 1 ರಿಂದ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ಡೀಸೆಲ್ ಚಾಲಿತ ಬಸ್‌ಗಳನ್ನು ಓಡಿಸಲು ಅನುಮತಿಸುವುದಿಲ್ಲ ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ ಘೋಷಿಸಿದೆ.ಡೀಸೆಲ್ ಬಸ್ಗಳನ್ನು ಸ್ಥಗಿತಗೊಳಿಸಿ ಎಲೆಕ್ಟ್ರಿಕ್, ಸಿಎನ್‌ಜಿ ಮತ್ತು ಬಿಎಸ್ 6 ಡೀಸೆಲ್ ಬಸ್‌ಗಳಿಗೆ ಮಾತ್ರ ಅನುಮತಿಸಲಾಗುವುದು ಎಂದು ಕೇಂದ್ರ ವಾಯುಗುಣಮಟ್ಟ ಆಯೋಗ ತಿಳಿಸಿದೆ.



Join Whatsapp