ಇಸ್ರೇಲ್ : ಬೆಂಜಮಿನ್ ಯುಗಾಂತ್ಯ: ನಫ್ತಾಲಿ ಬೆನೆಟ್ ನೂತನ ಪ್ರಧಾನಿ

Prasthutha|

ನವದೆಹಲಿ : ಇಸ್ರೇಲ್ ನಲ್ಲಿ ಕಳೆದ 12 ವರ್ಷ ಆಡಳಿತ ನಡೆಸಿದ್ದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕಾರ ಕೊನೆಗೊಂಡಿದೆ. ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್ ಆಯ್ಕೆಯಾಗಿದ್ದಾರೆ. ಬೆಂಜಮಿನ್ ಅವರು ಪದಚ್ಯುತಗೊಂಡಿರುವುದರಿಂದ ಬೆನೆಟ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಮತ್ತು ನೂತನ ಪ್ರಧಾನಿಯಾಗಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.

- Advertisement -

ಇಸ್ರೇಲ್ ರಾಜಕೀಯ ಪಕ್ಷಗಳ ಮೈತ್ರಿಕೂಟ ನಿನ್ನೆ ನೆತನ್ಯಾಹು ಅವರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸಿದ್ದರು. ಇಸ್ರೇಲ್ ನಲ್ಲಿ ಅತಿಹೆಚ್ಚು 12 ವರ್ಷ ಅಧಿಕಾರ ನಡೆಸಿದ ನೆತನ್ಯಾಹು ಬಹುಮತ ಕಳೆದುಕೊಂಡ ಕಾರಣ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಈ ಹಿಂದೆ ಇಸ್ರೇಲ್ ಸರಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಬೆನೆಟ್ ಬಲಪಂಥೀಯ ಪಕ್ಷ ಯಮಿನಾ ಪಕ್ಷದ ಮುಖಂಡರಾಗಿದ್ದಾರೆ. 8 ವಿಭಿನ್ನ ಸಿದ್ಧಾಂತಗಳ ಪಕ್ಷಗಳ ಮಿತ್ರಕೂಟ ರಚಿಸಿ ಬೆನೆಟ್ ಅಧಿಕಾರಕ್ಕೆ ಬಂದಿದ್ದಾರೆ. ಒಪ್ಪಂದದ ಪ್ರಕಾರ ಬೆನೆಟ್ ಇನ್ನು 2 ವರ್ಷ ಅಧಿಕಾರದಲ್ಲಿ ಇರಲಿದ್ದಾರೆ. ನಂತರ 2 ವರ್ಷ ಯಶ್ ಅತಿದ್ ಪಕ್ಷದ ಮುಖಂಡ ಇಸ್ರೇಲ್ ನ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.



Join Whatsapp