ಒಮಿಕ್ರಾನ್ ಆತಂಕ: ಜನರಿಗೆ 4ನೇ ಡೋಸ್ ವಾಕ್ಸಿನ್ ನೀಡಲು ಮುಂದಾದ ಈ ದೇಶ !

Prasthutha|

ಜೆರುಸಲೇಂ: ಒಮಿಕ್ರಾನ್ ರೂಪಾಂತರ ಸೋಂಕಿನ ಅಲೆಯನ್ನು ತಡೆಗಟ್ಟುವ ಸಲುವಾಗಿ ಇಸ್ರೇಲ್ ಜನರಿಗೆ ನಾಲ್ಕನೇ ವಾಕ್ಸಿನ್ ಡೋಸ್ ನೀಡಲು ಅನುಮೋದಿಸಿದೆ.  ಈ ನಿರ್ಣಯ ತೆಗೆದುಕೊಂಡ ಮೊದಲ ದೇಶವಾಗಿದೆ.

- Advertisement -

ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ನಾಚ್‌ಮನ್ ಆಶ್ ಗುರುವಾರ ತಡರಾತ್ರಿ ಮಾಧ್ಯಮಗೋಷ್ಠಿಯಲ್ಲಿ ಈ ನಿರ್ಧಾರ ಪ್ರಕಟಿಸಿದರು. ಈ ನಿರ್ಧಾರವು ಆರಂಭಿಕ ಸಂಶೋಧನೆಯನ್ನು ಆಧರಿಸಿದೆ. ಅಧಿಕಾರಿಗಳು ಪರಿಸ್ಥಿತಿ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ ನಾಲ್ಕನೇ ಡೋಸ್ ನೀಡಬೇಕೆಂದು ಹೇಳಿದರು.

Join Whatsapp