ದೇಶದಲ್ಲಿ ಒಮಿಕ್ರಾನ್‍ಗೆ ಮೊದಲ ಬಲಿ
Prasthutha: December 31, 2021

ಮುಂಬೈ: ಡಿ. 28 ರಂದು ಹೃದಯಾಘಾತದಿಂದ ಮೃತಪಟ್ಡ ವ್ಯಕ್ತಿಯ ಮರಣೋತ್ತರ ವರದಿ ಬಂದಿದ್ದು, ಆತನಿಗೆ ಒಮಿಕ್ರಾನ್ ಇತ್ತು ಎಂದು ತಿಳಿದುಬಂದಿದೆ.
ನೈಜೀರಿಯಾ ದೇಶದ ಪ್ರಯಾಣದ ಇತಿಹಾಸ ಹೊಂದಿದ್ದ 52 ವರ್ಷದ ವ್ಯಕ್ತಿಯೊಬ್ಬರು ಡಿಸೆಂಬರ್ 28 ರಂದು ಪಿಂಪ್ರಿ ಚಿಂಚ್ ವಾಡ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು ಎಂದು ಸುದ್ದಿಯಾಗಿತ್ತು. ಆದರೆ ಆತನಿಗೆ ಒಮಿಕ್ರಾನ್ ಇತ್ತು ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
