ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಕೊಂದ ಗಾಝಾದ ಕಂದಮ್ಮಗಳ ಫೋಟೋ ಬಿಡುಗಡೆ

Prasthutha|

- Advertisement -

ಭೀತಿ ಹುಟ್ಟಿಸುತ್ತೆ ಇಸ್ರೇಲ್‌ನಿಂದ ಈವರೆಗೆ ಕೊಲ್ಲಲ್ಪಟ್ಟ ಮಕ್ಕಳ ಸಂಖ್ಯೆ

ಗಾಝಾ/ ಫ್ಯಾಲೆಸ್ತಿನ್: ಇಸ್ರೇಲ್ ಫ್ಯಾಲೆಸ್ತೀನ್‌ನ ಗಾಝಾ ಪಟ್ಟಿಯ ಮೇಲೆ ಮೂರು ದಿನಗಳ ಬಾಂಬ್ ದಾಳಿಯ ಬಳಿಕ ಇದೀಗ ಕದನ ವಿರಾಮ ಘೋಷಿಸಲಾಗಿದೆ.

- Advertisement -

ಇತ್ತೀಚಿನ ಅಧಿಕೃತ ವರದಿಯ ಪ್ರಕಾರ ಈ ದಾಳಿಯಲ್ಲಿ 15 ಮಕ್ಕಳ ಸಹಿತ 44 ಮಂದಿ ಕೊಲ್ಲಲ್ಪಟ್ಟಿದ್ದಾರೆ‌. ಮತ್ತು ಕನಿಷ್ಠ 350 ಮಂದಿ ಗಾಯಗೊಂಡಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ 18 ವರ್ಷದ ಕೆಳಗಿನ 15 ಮಕ್ಕಳ ಹೆಸರುಗಳು ಮತ್ತು ಫೋಟೋ ಗಳನ್ನು ಅಲ್ ಜಝೀರಾ ಪ್ರಕಟಿಸಿದೆ. ಇನ್ನೂ ಲೋಕ ಜ್ಞಾನವೇ ಇಲ್ಲದ ಪುಟಾಣಿ ಕಂದಮ್ಮಗಳ ಮುಖ ನೋಡುವಾಗ ಮಾತ್ರ ಕರುಳು ಕಿತ್ತು ಬರುತ್ತದೆ.

2008ರಿಂದ ಇಸ್ರೇಲ್ ಫ್ಯಾಲೆಸ್ತೀನ್ ವಿರುದ್ಧ ನಾಲ್ಕು ಯುದ್ಧಗಳನ್ನು ಸಾರಿದ್ದು, ಈ ಅವಧಿಯಲ್ಲಿ ಸುಮಾರು 4000ದಷ್ಟು ನಾಗರಿಕರನ್ನು ಕೊಂದು ಹಾಕಿದ್ದು, ಇದರಲ್ಲಿ ಕಾಲು ಭಾಗದಷ್ಟು ಮಕ್ಕಳೇ ಇದ್ದಾರೆ.

ಡಿಫೆನ್ಸ್ ಫಾರ್ ಚಿಲ್ಡ್ರನ್ ಇಂಟರ್‌ನ್ಯಾಷನಲ್ ಮಾಹಿತಿಯ ಪ್ರಕಾರ 2000 ಇಸವಿಯ ಬಳಿಕ ಕನಿಷ್ಠ 2,200 ಮಕ್ಕಳು ಇಸ್ರೇಲ್ ದಾಳಿಯಲ್ಲಿ ಹತರಾಗಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತರಾದ ಮಕ್ಕಳ ಹೆಸರು ಮತ್ತು ವಯಸ್ಸು

  1. ಜಾಮಿಲ್ ನಜ್ಮ್ ಅಲ್ ದೀನ ನೈಜ್ಮ್ (4)
  2. ಅಲಾ ಅಬ್ದುಲ್ಲಾ ರಿಯಾದ್ ಖದ್ದೂಮ್ (5)
  3. ಮೂಮಿನ್ ಅಲ್ ನೈರಬ್ (5)
  4. ಹಝೀಮ್ ಸಲೇಮ್ (9)
  5. ಅಹ್ಮದ್ ಅಲ್ ನೈರಬ್ (11)
  6. ಜಾಮಿಲ್ ಇಹಬ್ ನಾಜಿಂ (13)
  7. ಮುಹಮ್ಮದ್ ಯಾಸಿರ್ ನಿಮ್ರ್ ಅಲ್ ನಬಾಹಿನ್ (13)
  8. ದಾಲಿಯಾ ಯಾಸಿರ್ ನಿಮ್ರ್ ಅಲ್ ನಬಾಹೀನ್ (13)
  9. ಮುಹಮ್ಮದ್ ಹಸೌನಾ (14)
  10. ಹಾಮಿದ್ ಹೈದರ್ ನಾಜಿಂ (16)
  11. ನಾಝ್ಮಿ ಫಾಯೆಝ್ ಅಬೂ ಕರ್ಶ್ (16)
  12. ಅಹ್ಮದ್ ವಾಲಿದ್ ಅಲ್ ಫರ್ರಾಂ (16)
  13. ಮೊಹಮ್ಮದ್ ಸಲಾಹ್ ನೈಜಿಮ್ (17)
    14 ಖಲೀಲ್ ಅಬೂ ಹಮಾದಾ (18) 15ಅಹ್ಮದ್ ಯಾಸಿರ್ ನಿಮ್ರ್ ಅಲ್ ನಬಾಹೀನ್ (9)


Join Whatsapp