ಉತ್ತರ ಗಾಝಾದಲ್ಲಿ ನೆರವು ವಿತರಣೆ ನಡೆಸದಂತೆ ಇಸ್ರೇಲ್ ತಡೆದಿದೆ: ವಿಶ್ವಸಂಸ್ಥೆ ಏಜೆನ್ಸಿ

Prasthutha|

ಗಾಝಾ: ಉತ್ತರ ಗಾಝಾದಲ್ಲಿ ನೆರವು ವಿತರಣೆ ನಡೆಸದಂತೆ ಇಸ್ರೇಲ್ ತಡೆದಿದೆ ಎಂದು ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆ ಏಜೆನ್ಸಿ ಯುಎನ್‍ಆರ್ ಡಬ್ಲ್ಯೂಎ ಹೇಳಿದೆ.

- Advertisement -

ಇನ್ನು ಮುಂದೆ ಉತ್ತರ ಗಾಝಾಕ್ಕೆ ಯಾವುದೇ ಆಹಾರ ವಿತರಣೆಗೆ ಅನುಮೋದಿಸುವುದಿಲ್ಲ ಎಂದು ಇಸ್ರೇಲ್ ಅಧಿಕಾರಿಗಳು ವಿಶ್ವಸಂಸ್ಥೆಗೆ ತಿಳಿಸಿದ್ದಾರೆ. ಇದು ಆಘಾತಕಾರಿಯಾಗಿದೆ. ಅಗತ್ಯ ಸಂದರ್ಭ ಜೀವರಕ್ಷಕ ನೆರವು ಪೂರೈಸುವುದಕ್ಕೆ ತಡೆಯಾಗಿದೆ ಎಂದು ಯುಎನ್‍ಆರ್ ಡಬ್ಲ್ಯೂಎ ಮುಖ್ಯಸ್ಥ ಫಿಲಿಪ್ ಲಝಾರಿನಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ , ಉತ್ತರ ಗಾಝಾಕ್ಕೆ ನೆರವು ವಿತರಣೆಯಿಂದ ಯುಎನ್‍ಆರ್ ಡಬ್ಲ್ಯೂಎ ಈ ಹಿಂದೆಯೇ ಹಿಂದೆ ಸರಿದಿದೆ. ಆದರೆ ನಾವು ವಿಶ್ವಸಂಸ್ಥೆಯ ಇತರ ಏಜೆನ್ಸಿಗಳು ಹಾಗೂ ನೆರವು ವಿತರಣೆ ಏಜೆನ್ಸಿಗಳ ಜತೆಗೂಡಿ ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದೇವೆ ಎಂದಿದೆ.



Join Whatsapp