ಹೈದರಾಬಾದ್: ಇಸ್ಲಾಮೋಫೋಬಿಯಾ ಪೋಸ್ಟ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಟ್ವಿಟ್ಟರ್ ಇಂಡಿಯಾ ಕಂಪೆನಿಗೆ ಸುಪ್ರೀಮ್ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಹಿರಿಯ ವಕೀಲ ಖಾಕಾ ಐಜಾಝುದ್ದೀನ್ ಅವರು ಸಲ್ಲಿಸಿದ್ದ SLP ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅವರ ಪೀಠವು, ಸಾಲಿಟರ್ ಜನರಲ್ ಅವರಿಗೆ ಪ್ರತಿಕ್ರಿಯಿಸುವಂತೆ ನೋಟಿಸ್ ನಲ್ಲಿ ಸೂಚಿಸಿದೆ.
ಇಸ್ಲಾಮೋಫೋಬಿಯಾ ಪೋಸ್ಟ್ ಮಾಡಿದ ಆರೋಪದಲ್ಲಿ ಟ್ವಿಟ್ಟರ್ ಮತ್ತು ಅದರ ಬಳಕೆದಾರರ ವಿರುದ್ಧ ಕ್ರಿಮಿನಲ್ ದೂರುಗಳನ್ನು ದಾಖಲಿಸಲು ಭಾರತ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ವಕೀಲ ಐಜಾಝುದ್ದೀನ್ ಸುಪ್ರೀಮ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಟ್ವಿಟ್ಟರ್ ಮತ್ತು ಇತರೆ ಆ್ಯಪ್ ಗಳಲ್ಲಿ ದ್ವೇಷದ ಪೋಸ್ಟ್ ಗಳಲ್ಲಿ ಭಾಗಿಯಾಗಿರುವ ಬಳಕೆದಾರರ ವಿರುದ್ಧ ಕೇಂದ್ರ ತನಿಖಾ ಏಜೆನ್ಸಿಗಳಾದ ಸಿಬಿಐ, ಎನ್.ಐ.ಎ ಗಳ ಮೂಲಕ ತನಿಖೆ ನಡೆಸುವಂತೆ SLP ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.