ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಯುವಕನ ಕೈಗೆ 9 ತಿಂಗಳ ಹಸುಗೂಸು ನೀಡಿ ನಾಪತ್ತೆಯಾದ ಮಹಿಳೆ !

Prasthutha|

- Advertisement -

ರಾಯಚೂರು: ಇಲ್ಲಿನ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಯುವಕನ ಕೈಗೆ 9 ತಿಂಗಳ ಹಸುಗೂಸನ್ನು ಕೊಟ್ಟು ಅಪರಿಚಿತ ಮಹಿಳೆ ನಾಪತ್ತೆಯಾದ ಘಟನೆ ನಡೆದಿದೆ. ಮೈಸೂರಿನ ಹೆಚ್.ಡಿ.ಕೋಟೆಯ ನಿವಾಸಿ ರಘು ಕೈಗೆ ಮಗು ಕೊಟ್ಟು ಮಹಿಳೆ ನಾಪತ್ತೆಯಾಗಿದ್ದಾರೆ. ಸದ್ಯ 9 ತಿಂಗಳ ಹಸುಗೂಸನ್ನು ರಘು ಬಾಲಮಂದಿರದ ವಶಕ್ಕೆ ನೀಡಿದ್ದಾರೆ.

ವೈಯಕ್ತಿಕ ಕೆಲಸಕ್ಕಾಗಿ ಹೆಚ್.ಡಿ.ಕೋಟೆಯ ನಿವಾಸಿ ರಘು ರಾಯಚೂರಿಗೆ ತೆರಳಿದ್ದರು. ಮೈಸೂರಿಗೆ ಹಿಂತಿರುಗಲು ರಾಯಚೂರು ಬಸ್ ಸ್ಟ್ಯಾಂಡ್ನಲ್ಲಿ ಮೈಸೂರು ಬಸ್ಗಾಗಿ ಕಾದು ಕುಳಿತಿದ್ದ ವೇಳೆ ಅಪರಿಚಿತ ಮಹಿಳೆ ಮಗುವನ್ನು ರಘು ಕೈಗೆ ನೀಡಿ ನಾಪತ್ತೆಯಾಗಿದ್ದಾರೆ.

- Advertisement -

ಮಗು ಕೊಟ್ಟು 3 ಗಂಟೆಯಾದರೂ ಮಹಿಳೆ ವಾಪಸ್ಸು ಬಂದಿಲ್ಲ. ಈ ಹಿನ್ನೆಲೆ ರಘು ಮಗು ಜೊತೆ ಮೈಸೂರಿಗೆ ಬಂದಿದ್ದಾರೆ. ಬಳಿಕ ರಘು ಮಗುವನ್ನು ರಕ್ಷಿಸಿ ಲಷ್ಕರ್ ಪೊಲೀಸ್ ಠಾಣೆಗೆ ನೀಡಿದ್ದಾರೆ. ಮಗುವಿನ ಆರೈಕೆ ಮಾಡಿದ ಸಿಬ್ಬಂದಿ ಮಗುವನ್ನು ಬಾಲಮಂದಿರದ ವಶಕ್ಕೆ ನೀಡಿದ್ದಾರೆ. ಮಗುವಿನ ತಾಯಿ ಪತ್ತೆಗೆ ರಾಯಚೂರು ಪೊಲೀಸರಿಗೆ ತಿಳಿಸಿದ್ದಾರೆ.

Join Whatsapp