ಇಸ್ಲಾಂ ಎಂದರೆ ಶಾಂತಿ ಮತ್ತು ಯೋಗಕ್ಷೇಮ: ಅಜಿತ್ ದೋವಲ್

Prasthutha|

ಹೊಸದಿಲ್ಲಿ: ಇಸ್ಲಾಂ ಎಂದರೆ ಶಾಂತಿ ಮತ್ತು ಯೋಗಕ್ಷೇಮ. ಉಗ್ರಗಾಮಿತ್ವ ಮತ್ತು ತೀವ್ರವಾದಿ ಚಿಂತನೆಯು ಇಸ್ಲಾಂ ಧರ್ಮದ ಮೂಲ ತತ್ವಕ್ಕೆ ವಿರುದ್ಧವಾದುದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅಭಿಪ್ರಾಯಪಟ್ಟಿದ್ದಾರೆ.

- Advertisement -

ಇಂಡೊನೇಷ್ಯಾ ಮತ್ತು ಭಾರತೀಯ ಉಲೇಮಾಗಳು ಹಾಗೂ ಇತರ ನಾಯಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಅವರು, ಪ್ರಗತಿಪರ ವಿಚಾರಗಳನ್ನು ಪ್ರಚಾರ ಮಾಡುವ ಮೂಲಕ ತೀವ್ರವಾದಿ ಹಾಗೂ ಉಗ್ರಗಾಮಿಗಳನ್ನು ಹತ್ತಿಕ್ಕುವಲ್ಲಿ ಉಲೇಮಾಗಳ ಪಾತ್ರ ಮಹತ್ವದ್ದಾಗಿದೆ. ಐಸಿಸ್‌ ಪ್ರೇರಿತ ಭಯೋತ್ಪಾದನಾ ಸಂಘಟನೆಗಳು ಹಾಗೂ ಸಿರಿಯಾ, ಅಫ್ಗಾನಿಸ್ತಾನದಂತಹ ದೇಶಗಳಿಂದ ಮರಳಿರುವ ಉಗ್ರರು ದೇಶದ ಭದ್ರತೆಗೆ ಸವಾಲಾಗಿ ಪರಿಣಮಿಸಿದ್ದಾರೆ. ಇವರ ನಿರ್ಮೂಲನೆಗೆ ನಾಗರಿಕ ಸಮಾಜದ ಸಹಕಾರ ತುಂಬಾ ಅಗತ್ಯ’ ಎಂದಿದ್ದಾರೆ.

‘ಸಹನೆ, ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆ ಉತ್ತೇಜಿಸುವುದಕ್ಕಾಗಿ ಭಾರತ ಮತ್ತು ಇಂಡೊನೇಷ್ಯಾದ ಉಲೇಮಾಗಳು ಹಾಗೂ ತತ್ವಜ್ಞಾನಿಗಳನ್ನು ಒಗ್ಗೂಡಿಸುವುದು, ಆ ಮೂಲಕ ಹಿಂಸಾತ್ಮಕ ಉಗ್ರಗಾಮಿತ್ವ, ಭಯೋತ್ಪಾದನೆ ಮತ್ತು ತೀವ್ರವಾದಿತ್ವದ ವಿರುದ್ಧ ಸಮರ ಸಾರುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಪ್ರಜಾಪ್ರಭುತ್ವದಲ್ಲಿ ದ್ವೇಷ ಭಾಷಣ, ಪೂರ್ವಾಗ್ರಹ, ರಾಕ್ಷಸೀಕರಣ, ಹಿಂಸೆ, ಬಿಕ್ಕಟ್ಟು ಹಾಗೂ ಧರ್ಮದ ದುರಪಯೋಗಕ್ಕೆ ಅವಕಾಶವೇ ಇಲ್ಲ’ ಎಂದು ಹೇಳಿದ್ದಾರೆ.



Join Whatsapp