ಕನ್ನಡ ರಾಜ್ಯೊತ್ಸವದ ಪ್ರಯುಕ್ತ ಐ.ಎಸ್.ಎಫ್ ವತಿಯಿಂದ ನ.4ರಂದು ಅದ್ಧೂರಿ ‘ಕರುನಾಡ ಸಂಭ್ರಮ’

Prasthutha|

ದಮ್ಮಾಮ್: 67ನೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಂಡಿಯನ್ ಸೋಶಿಯಲ್ ಫೋರಂ, ದಮ್ಮಾಮ್ ಕರ್ನಾಟಕ ಘಟಕದ ವತಿಯಿಂದ  ನ.4ರಂದು ಇಲ್ಲಿನ ಸಫ್ವಾದ ಅಲ್ ಹಿನಾಬಿ ಸಭಾಂಗಣದಲ್ಲಿ ಅದ್ಧೂರಿ ಅನಿವಾಸಿ ಕನ್ನಡಿಗರ ಸಮ್ಮೇಳನ ‘ಕರುನಾಡ ಸಂಭ್ರಮ’ ಆಯೋಜಿಸಲಾಗಿದೆ ಎಂದು  ಇಂಡಿಯನ್ ಸೋಶಿಯಲ್ ಫೋರಂ ಮಾಧ್ಯಮ ಕಾರ್ಯದರ್ಶಿ ಮುಹಮ್ಮದ್ ಶರೀಫ್ ರಂಗೇಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ನ. 4ರ ಶುಕ್ರವಾರ ಅಪರಾಹ್ನ 3.30ಕ್ಕೆ ಆರಂಭಗೊಳ್ಳಲಿರುವ ಈ ಸಮಾರಂಭದ ಭಾಗವಾಗಿ ಸಾಂಸ್ಕೃತಿಕ ಸಂಜೆ, ಮನರಂಜನೆ ಹಾಗೂ ವಿವಿಧ ವಿನೋದಾವಳಿಗಳು ಮತ್ತು ಇನ್ನೂ ಅನೇಕ ಕಾರ್ಯಕ್ರಮ ಹಾಗೂ ಪ್ರದರ್ಶನಗಳು  ನಡೆಯಲಿವೆ. ತಿಂಡಿ ಪ್ರಿಯರಿಗಾಗಿ ತವರಿನ ರುಚಿ ಒದಗಿಸುವ ವಿವಿಧ ಖಾದ್ಯಗಳನ್ನು ಮಾರಾಟ ಮಾಡುವ ಫುಡ್ ಕೌಂಟರ್ ಗಳು ಸಮಾರಂಭದ ಅಂಗಣದಲ್ಲಿ ವ್ಯವಸ್ಥೆಪಡಿಸಲಾಗುವುದು. ಕರ್ನಾಟಕದ ವೈಭವವನ್ನು ಪ್ರತಿಬಿಂಬಿಸುವ ಹಲವು ಪ್ರವಾಸಿ ತಾಣಗಳ ಕುರಿತ ಪರಿಚಯ ಒದಗಿಸುವ ಪ್ರದರ್ಶನಗಳೂ ಸಮಾರಂಭದಲ್ಲಿ ಇರಲಿದೆ ಎಂದರು.

- Advertisement -

ಕರುನಾಡ ಸಂಭ್ರಮದ ಪ್ರಚಾರಾರ್ಥ ಸಂಘಟನೆಯು  ಸೆ.23ರ ಶುಕ್ರವಾರ ಅಲ್ ಖೋಬರ್ ನಲ್ಲಿ    ಪೋಸ್ಟರ್ ಬಿಡುಗಡೆ ಕಾರ್ಯಕಮವನ್ನು  ಆಯೋಜಿಸಿದೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

- Advertisement -