ರಿಯಾದ್: ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Prasthutha|

► ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಪುಂಜಾಲಕಟ್ಟೆ ಆಯ್ಕೆ

- Advertisement -

ರಿಯಾದ್: ಇಂಡಿಯನ್ ಸೋಶಿಯಲ್ ಫೋರಂ ರಿಯಾದ್, ಕರ್ನಾಟಕ ರಾಜ್ಯ ಸಮಿತಿಯ (2021-2024)ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಸೌದಿ ಅರೇಬಿಯಾದ ರಿಯಾದ್ ನಲ್ಲಿ ಶುಕ್ರವಾರ ನಡೆಯಿತು.

ಚುನಾವಣಾಧಿಕಾರಿಯಾಗಿದ್ದ ಕೇಂದ್ರ ಸಮಿತಿ ಸದಸ್ಯ ಹಾರಿಸ್ ವವಾಡ್ ಮತ್ತು ಮುಹಮ್ಮದ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿ ರಿಯಾದ್ ನ ನೂತನ ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಪುಂಜಾಲಕಟ್ಟೆ ರವರನ್ನು ಆಯ್ಕೆ ಮಾಡಲಾಯಿತು.

- Advertisement -


ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜುದ್ದೀನ್ ಸಜಿಪ, ಉಪಾಧ್ಯಕ್ಷರಾಗಿ ಉಮರ್ ಫಾರೂಕ್ ಸೋಮವಾರಪೇಟೆ, ಕಾರ್ಯದರ್ಶಿಗಳಾಗಿ ಜವಾದ್ ಬಸ್ರೂರು ಮತ್ತು ಅಸ್ಘರ್ ಅಬೂಬಕ್ಕರ್ ಚಕ್ಮಕ್ಕಿ ಯವರನ್ನು ಆಯ್ಕೆ ಮಾಡಲಾಯಿತು. ರಾಜ್ಯ ಸಮಿತಿ ಸದಸ್ಯರಾಗಿ ನಿಝಾಮ್ ಬಜ್ಪೆ, ಮಿಹಾಫ್ ಸುಲ್ತಾನ್, ನಝೀರ್ ಹಂಡೆಲ್ ಮತ್ತು ಫೈಝಲ್ ಅಮ್ಮೆಂಬಲರವರನ್ನು ಚುನಾಯಿಸಲಾಯಿತು.

ಕಾರ್ಯಕ್ರಮದಲ್ಲಿ ಅಬೂಬಕರ್ ಸಿದ್ದೀಕ್ ಮಡಿಕೇರಿ ಸದಸ್ಯರನ್ನು ಸ್ವಾಗತಿಸಿದರು. ನಿರ್ಗಮಿತ ಅಧ್ಯಕ್ಷರಾದ ಸಾಬಿತ್ ಬಜ್ಪೆರವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸೌದಿ ಅರೇಬಿಯಾದಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠವಾಗಿ ಬೆಳೆಸಿ, ಜನಪರ ಕೆಲಸಗಳನ್ನು ಮಾಡಲು ಕರೆ ನೀಡಿದರು.

ಕಾರ್ಯದರ್ಶಿ ಸಿರಾಜ್ ಸಜೀಪ ಕಳೆದ 3 ವರ್ಷದ ಅವಧಿಯಲ್ಲಿ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ – ಕರ್ನಾಟಕ ರಾಜ್ಯ ಸಮಿತಿ ನಡೆಸಿದ ಕೆಲಸ ಕಾರ್ಯ ಹಾಗೂ ಸಮಾಜ ಸೇವಾ ಚಟುವಟಿಕೆಯ ಬಗ್ಗೆ ವರದಿ ಮಂಡಿಸಿದರು.



Join Whatsapp