ಉತ್ತರ ಪ್ರದೇಶದ ವ್ಯಕ್ತಿ ಸೌದಿಯಲ್ಲಿ ಹೃದಯಾಘಾತದಿಂದ ನಿಧನ: ಮೃತದೇಹವನ್ನು ಸ್ವದೇಶಕ್ಕೆ ಕಳುಹಿಸಲು ನೆರವಾದ ISF

Prasthutha|

ಬುರೈದ: ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಭಾರತದ ಉತ್ತರ ಪ್ರದೇಶದ ವ್ಯಕ್ತಿಯ ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ ಬುರೈದ ಘಟಕ ನೆರವಾಗಿದೆ. ಬುರೈದ ನಗರದಲ್ಲಿ ಸ್ಟೀಲ್ ಕಂಪನಿಯೊಂದರಲ್ಲಿ ದುಡಿಯುತ್ತಿದ್ದ ಸುಮಾರು 31 ವರ್ಷ ಪ್ರಾಯದ ರೆಹಾನ್ ಖಾನ್ ಎಂಬ ಉತ್ತರ ಪ್ರದೇಶ ಮೂಲದ ವ್ಯಕ್ತಿಯು ದಿನಾಂಕ 25-೦7-2021 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅಸಮರ್ಪಕ ದಾಖಲೆಗಳ ಕಾರಣ ಮೃತದೇಹವನ್ನು ಬುರೈದಾದ ಸೆಂಟ್ರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತೆಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

- Advertisement -


ಈ ವೈರಲ್ ಸುದ್ದಿಯ ಜಾಡುಹಿಡಿದ ಇಂಡಿಯನ್ ಸೋಶಿಯಲ್ ಫೋರಂ ಬುರೈದ ಘಟಕದ ರಶೀದ್ ಉಚ್ಚಿಲ ಮತ್ತು ಜಮಾಲುದ್ದೀನ್ ಪಾಂಡೇಲ್ ರವರ ಸಹಕಾರದೊಂದಿಗೆ ತಕ್ಷಣ ಮೃತ ವ್ಯಕ್ತಿಯ ಕುಟುಂಬಿಕರನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಪಡೆಯಲಾಯಿತು. ಅದೇ ರೀತಿ ಭಾರತೀಯ ರಾಯಭಾರಿ ಕಚೇರಿ ಮತ್ತು ಸ್ಥಳೀಯ ಸರಕಾರಿ ಕಚೇರಿಗಳನ್ನು ಸಂಪರ್ಕಿಸಿ ಎಲ್ಲಾ ಅಸಮರ್ಪಕ ದಾಖಲೆಗಳನ್ನು ಸರಿಪಡಿಸಿ ಅಂತಿಮವಾಗಿ ದಿನಾಂಕ 03-09-2021 ರಂದು ಮೃತದೇಹವನ್ನು ಊರಿಗೆ ಕಳುಹಿಸಲು ಯಶಸ್ವಿಯಾದರು.


ರೆಹಾನ್ ಖಾನ್ ಅವರ ಅಕಾಲಿಕ ಮರಣಕ್ಕೆಇಂಡಿಯನ್ ಸೋಶಿಯಲ್ ಫೋರಂ ಬುರೈದ ಘಟಕವು ತೀವ್ರ ಸಂತಾಪ ಸೂಚಿಸಿದೆ. ಅದೇ ರೀತಿ ಇಂಡಿಯನ್ ಸೋಶಿಯಲ್ ಫೋರಂನ ಈ ಸತ್ಕಾರ್ಯಕ್ಕೆ ಮೃತರ ಕುಟುಂಬಸ್ಥರು ಧನ್ಯವಾದ ಸಲ್ಲಿಸಿದ್ದಾರೆ.

Join Whatsapp