ಶಿಯೊಮಿ ಕಂಪನಿಯಿಂದ ರಿಟೇಲ್ ಮಾರಾಟಗಾರರಿಗೆ ಅನ್ಯಾಯ; ಮೊಬೈಲ್ ರೆಟೈಲರ್ಸ್ ಅಸೋಸಿಯೇಷನ್ ಆರೋಪ

Prasthutha|

ಬೆಂಗಳೂರು: ಬೆಂಗಳೂರು-ಭಾರತದ ಪ್ರತಿಷ್ಠಿತ ಮೊಬೈಲ್ ಬ್ರಾಂಡ್ ಆಗಿರುವ ಶಿಯೋಮಿ ಮೊಬೈಲ್‌ ಗಳನ್ನು ಆನ್‌ಲೈನ್ ನೀಡುವ ಎಲ್ಲಾ ಆಫರ್‌ ಗಳನ್ನು ಆಫ್‌ಲೈನ್ ನಲ್ಲಿಯೂ ನೀಡಬೇಕೆಂದು ಅಖಿಲ ಭಾರತ ಮೊಬೈಲ್ ರಿಟೇಲ್ ವ್ಯಾಪಾರಿಗಳ ಸಂಘ ಒತ್ತಾಯಿಸಿದೆ.

ಸಂಘದ ರಾಜ್ಯಾಧ್ಯಕ್ಷ ರವಿಕುಮಾರ್ ಮಾತನಾಡಿ, ಶಿಯೋಮಿಯ ಮಾರಾಟ ನಿರ್ದೇಶಕರಿಗೆ ಅಲ್ ಇಂಡಿಯಾ ಮೊಬೈಲ್ ರಿಟೇಲರ್ ಅಸೋಸಿಯೇಶನ್ ನಿಂದ ಮನವಿ ಸಲ್ಲಿಸಲಾಗಿದೆ. ಇನ್ನು ಪ್ಲಿಪ್ ಕಾರ್ಟ್, ಅಮೆಝಾನ್ ಅನ್‌ಲೈನ್ ಮಾರಾಟ ಸಂಸ್ಥೆಗಳಿಗೆ ಹೊಸ ಸ್ಟಾಕ್‌ ಗಳನ್ನು ನೀಡಲಾಗುತ್ತಿದೆ. ಆದರೆ ರಿಟೇಲ್ ವ್ಯಾಪಾರಿಗಳಿಗೆ ಯಾವುದೇ ಹೊಸ ಸ್ಟಾಕ್‌ ಗಳನ್ನ ನೀಡಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- Advertisement -

ರಿಟೇಲ್ ವ್ಯಾಪಾರಿಗಳು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದೇವೆ. ಇನ್ನು ಆನ್‌ ಲೈನ್ ಗಳಿಗೆ ನೀಡುವಂತೆ ಆಪ್‌ ಲೈನ್‌ ಗಳಿಗೂ ಸಮಾನತೆ ನೀಡಬೇಕು. ಐಮ್ರಾ ಕಂಪನಿಯ ಉಭಯ ನೀತಿ ಮತ್ತು ಭಾರತದಾದ್ಯಂತ ಇರುವ ಸುಮಾರು 2೦೦೦೦ ಕ್ಸಿಯೋಮಿ ಆದ್ಯತೆಯ ಪಾಲುದಾರರೊಂದಿಗೆ ಒಪ್ಪಂದದಂತೆ ಸರಿಪಡಿಸಬೇಕು ಎಂದು ತಿಳಿಸಿದರು.

ಶಿಯೋಮಿ ಕಂಪನಿಯ ದ್ವಿಮುಖ ನೀತಿಯಿಂದಾಗಿ ತುಂಬಾ ನಷ್ಟವಾಗುತ್ತಿದೆ. ಶಿಯೋಮಿ ಕಂಪನಿಯ ವಿದೇಶಿ ಕಂಪನಿ ವಾತ್ಸಲ್ಯದಿಂದ ಕೇವಲ ಆನ್ ಲೈನ್ ಕಂಪನಿಗಳಿಗೆ ಮಾತ್ರ ಹೊಸ ಹಾಗೂ ಹೆಚ್ಚು ಬೇಡಿಕೆ ಇರುವ ಸ್ಟಾಕ್ ಸರಬರಾಜು ಮಾಡುತ್ತಿದೆ ಇದರಿಂದ ಮೊಬೈಲ್ ಅಂಗಡಿಗಳು ತೀವ್ರ ಆರ್ಥಿಕ ನಷ್ಟ ಹಾಗೂ ತಮ್ಮ ಗ್ರಾಹಕರನ್ನು ಕಳೆದುಕೊಳ್ಳುವ ಪರಿಸ್ಥಿತಿಯನ್ನು ಉಂಟುಮಾಡುತ್ತಿದೆ ಎಂದು ಆರೋಪಿಸಿದರು.

ಸಂಘದ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಗೌತಮ್ ರಾಜಪುರೋಹಿತ ಮಾತನಾಡಿ, ಈ ದೊರಣೆಯಿಂದ ಗ್ರಾಹಕರಿಗೆ online ಖರೀದಿ ಬಿಟ್ಟು ಬೇರೆ ಮಾರ್ಗ ಇಲ್ಲದಂತೆ ಮಾಡುವ ದುರುದ್ದೇಶ ಎದ್ದು ಕಾಣುತ್ತಿದೆ. ಈ ಬಗ್ಗೆ AIMRA ಕಂಪನಿಯ ಸೇಲ್ಸ್ ಹೆಡ್ ಸುನಿಲ್ ಬೇಬಿ ರವರಿಗೆ ಒಂದು ಮುಕ್ತ ಪತ್ರವನ್ನು ಬರೆದು ನಮ್ಮ ಸಮಸ್ಯೆಯನ್ನು ಮನವರಿಕೆ ಮಾಡಲಾಗಿದೆ. ಆನ್ ಲೈನ್ ಹಾಗೂ ಆಫ್ ಲೈನ್ ಎರಡು ಕಡೆ ಸಮಾನವಾಗಿ ಸ್ಟಾಕ್ ಹಂಚಿಕೆ ಮಾಡಬೇಕು ಮತ್ತು ಆನ್ಲೈನ್ ಗೆ ಮಾತ್ರ ಕೊಡುತ್ತಿರುವ ಆಫರ್ ಗಳನ್ನು ಆಫ್ಲೈನ್ ಗು ವಿಸ್ತರಿಸಬೇಕು. ಅನಗತ್ಯ ಆನ್ ಲೈನ್ ವಾತ್ಸಲ್ಯ ನಿಲ್ಲಿಸಬೇಕು ಮತ್ತು ನಮ್ಮನ್ನು ಸಮಾನವಾಗಿ ಕಂಡು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದ್ದಾರೆ.

- Advertisement -