ನಿಮ್ಮ ಬದ್ಧತೆ ಕೇವಲ ರಾಹುಲ್ ಗಾಂಧಿಗೆ ಮಾತ್ರ ಸೀಮಿತವೇ?: ಯು.ಟಿ.ಖಾದರ್’ಗೆ SDPI ಪ್ರಶ್ನೆ

Prasthutha|

ಬೆಂಗಳೂರು: ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಸಾಂವಿಧಾನಿಕ ಹಕ್ಕಾದ ಹಿಜಾಬ್ ಧರಿಸಲು ನಿರ್ಬಂಧಗಳನ್ನು ಹೇರಿದಾಗ ಅದರ ವಿರುದ್ಧ ದಿಟ್ಟತನದಿಂದ ಹೋರಾಟ ಮಾಡಿದಾಗ ಅವರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ಹೀಯಾಳಿಸಿದ ಯು.ಟಿ.ಖಾದರ್ ಇಂದು ನೀವು ಪ್ರತಿಭಟಿಸಿದ್ದು ಎಲ್ಲಿ ಕರಾಚಿಯಲ್ಲೊ? ನಿಮ್ಮ ಬದ್ಧತೆ ಕೇವಲ ರಾಹುಲ್ ಗಾಂಧಿಗೆ ಮಾತ್ರ ಸೀಮಿತವೇ? ಎಂದು ಎಸ್’ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಪ್ರಶ್ನಿಸಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಜಾಬ್ ನಿಷೇಧದ ವಿರುದ್ಧ ಹೋರಾಟ ಮಾಡಿದಾಗ ಅದರ ವಿರುದ್ಧ ಖಾದರ್ ಟೀಕಿಸಿದ್ದರು. ಪ್ರತಿಭಟನೆ ನಡೆಸುವವರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದರು. ಈಗ ಖಾದರ್ ಅವರು ರಾಹುಲ್ ಗಾಂಧಿ ಪರವಾಗಿ ಬೀದಿಗಿಳಿದಿದ್ದಾರೆ ಎಂದು ಟೀಕಿಸಿದ್ದಾರೆ.

Join Whatsapp