ರೈಲಿನಲ್ಲಿ ವಿವಾದಾತ್ಮಕ ‘ಪತ್ರಿಕೆ’ ವಿತರಣೆ: ಪರವಾನಗಿದಾರರಿಗೆ IRCTC ಎಚ್ಚರಿಕೆ

Prasthutha|

ಬೆಂಗಳೂರು: ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ವಿವಾದಾತ್ಮಕ ಲೇಖನಗಳನ್ನು ಹೊಂದಿರುವ ಅನಧಿಕೃತ ಪ್ರಕಟಣೆಯ ಪ್ರತಿಗಳನ್ನು ಬೆಂಗಳೂರಿನ ರೈಲ್ವೆ ಪ್ರಯಾಣಿಕರು ಶುಕ್ರವಾರ ಪತ್ತೆ ಹಚ್ಚಿದ್ದು, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ತನ್ನ ಆನ್ ಬೋರ್ಡ್ ಸೇವೆಗಳ ಪರವಾನಗಿದಾರರಿಗೆ ಎಚ್ಚರಿಕೆ ನೀಡಿದೆ.

- Advertisement -

ಬೆಂಗಳೂರಿನಿಂದ ಮದರಾಸಿಗೆ ಹೊರಟಿದ್ದ ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಓದುಗರಿಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಳಗೆ ಸಪ್ಲಿಮೆಂಟ್ ಮಾದರಿಯ ಪ್ರತಿಯೊಂದನ್ನು ನೀಡಲಾಗಿತ್ತು. ಅದರಲ್ಲಿ ವಿವಾದಾತ್ಮಕವಾದ ಲೇಖನಗಳು ಪ್ರಕಟವಾಗಿದ್ದವು. ರೈಲಿನಲ್ಲಿ ಪತ್ರಿಕೆ ವಿತರಿಸಲು ಪಿ. ಕೆ. ಶಫಿ ಪರವಾನಿಗೆ ಪಡೆದಿದ್ದಾರೆ. ಅವರಿಗೂ ಈ ಸಪ್ಲಿಮೆಂಟರಿ ಬಗೆಗೆ ಅಚ್ಚರಿ ಮೂಡಿದೆ.

ಐಆರ್ ಸಿಟಿಸಿ- ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ರೈಲಿನೊಳಗಿನ ಪರವಾನಿಗೆ ಹೊಂದಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಪರವಾನಿಗೆ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

- Advertisement -

ಬೆಂಗಳೂರಿನ ಆರ್ಯವಾರ್ತ ಎಕ್ಸ್ ಪ್ರೆಸ್ ನಲ್ಲಿ ಹಿಂದೂಗಳ, ಸಿಖ್ ರ, ಬೌದ್ಧರ ಜನಾಂಗೀಯ ಹತ್ಯೆ, ಇಸ್ಲಾಮಿಕ್ ನಿಯಮಗಳಡಿ ಗಮನಿಸಬೇಕು ಮತ್ತು ವಿಶ್ವ ಸಂಸ್ಥೆಯು ಔರಂಗಜೇಬನನ್ನು ಹಿಟ್ಲರ್ ಮಾದರಿಯ ಜನಾಂಗೀಯ ಹತ್ಯೆಯ ಹರಿಕಾರ ಎಂದು ಘೋಷಿಸುವುದು ಮೊದಲಾದ ಲೇಖನಗಳು ಇದ್ದವು.

ರೈಲಿನಲ್ಲಿ ವಿತರಣಾ ಹಕ್ಕು ಪಡೆದ ಪಿ. ಕೆ. ಶಫಿಯವರು ಸಪ್ಲಿಮೆಂಟಾಗಿ ನನಗೆ ಪೂರೈಕೆದಾರರಿಂದ ಬಂದಿತ್ತು ಎಂದು ಸದರಿ ಪತ್ರಿಕೆಯವರಿಗೆ ತಿಳಿಸಿದ್ದಾರೆ. ಒಬ್ಬ ಪ್ರಯಾಣಿಕರು ಇದು ಪತ್ರಿಕೆಯ ಸಪ್ಲಿಮೆಂಟ್ ಅಲ್ಲ ಎಂದು ಟ್ವೀಟ್ ಮಾಡಿದ್ದರು.

“ರೈಲಿನಲ್ಲಿ ಪತ್ರಿಕೆ ಹಂಚಿದ ನಮ್ಮ ಹುಡುಗರಿಗೆ ಹೀಗೊಂದು ಸಪ್ಲಿಮೆಂಟ್ ಒಳಗಿರುವುದು ಗೊತ್ತಿಲ್ಲ. ಸತ್ಯವೆಂದರೆ ಅವರಾರೂ ತಾವು ವಿತರಿಸುವ ಪತ್ರಿಕೆಯಲ್ಲಿ ಏನು ಬಂದಿದೆ ಎಂದು ಓದುವವರಲ್ಲ” ಎಂದು ಶಫಿ ಹೇಳುತ್ತಾರೆ.

“ಅವರಿಗೆ ಯಾವುದೇ ಸಪ್ಲಿಮೆಂಟ್ ಇಲ್ಲವೇ ಕರಪತ್ರ ಹಂಚಬೇಡಿ. ಮುಖ್ಯ ಪತ್ರಿಕೆಯನ್ನು ಮಾತ್ರ ನೀಡಿ ಎಂದು ಹಿಂದೆಯೂ ಹೇಳಿದ್ದೆ. ಈಗ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ” ಎಂದೂ ಅವರು ಹೇಳಿದರು.

“ನಾವು ಪರವಾನಿಗೆದಾರರಿಗೆ ಎಚ್ಚರಿಕೆ ನೀಡಿದ್ದೇವೆ. ಪರವಾನಿಗೆ ಒಪ್ಪಂದದಂತೆ ಕನ್ನಡ ದಿನ ಪತ್ರಿಕೆಗಳು ಮತ್ತು ಡೆಕ್ಕನ್ ಹೆರಾಲ್ಡ್ ನ ಕಾಂಪ್ಲಿಮೆಂಟ್ ಸಪ್ಲಿಮೆಂಟ್ ಗಳನ್ನು ಮಾತ್ರ ಕೊಡಬೇಕು. ಲೈಸೆನ್ಸ್ ದಾರರು ಒಪ್ಪಂದಕ್ಕೆ ಬದ್ಧರಾಗಿರಬೇಕು.” ಐಆರ್ ಸಿಟಿಸಿ ನಿರ್ದೇಶಕರಾದ ರಜನಿ ಹಸೀಜ ತಿಳಿಸಿದ್ದಾರೆ.

ಶುಕ್ರವಾರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗೋಪಿಕಾ ಭಕ್ಷಿ ಎನ್ನುವವರು ಈ ಪತ್ರಿಕೆಯ ಪ್ರತಿ ಪಡೆದಿದ್ದಾರೆ. ಅವರು ಕೂಡಲೆ ಅದರ ಫೋಟೋ ತೆಗೆದು ಟ್ವೀಟ್ ಮಾಡಿದ್ದಾರೆ.

“ಇಂದು ಬೆಳಿಗ್ಗೆ ನಾನು ಬೆಂಗಳೂರಿನಿಂದ ಚೆನ್ನೈಗೆ ಹೋಗುವ ಶತಾಬ್ದಿ ಎಕ್ಸ್ ಪ್ರೆಸ್ ಏರಿದೆ. ಆಗ ಹೆಚ್ಚಿನ ಆಸನಗಳಲ್ಲಿ ಈ ಆರ್ಯವಾರ್ತ ಎಂಬ ವಿವಾದಾತ್ಮಕವಾದ ಲೇಖನಗಳಿದ್ದ ಪತ್ರಿಕೆಯ ಸಪ್ಲಿಮೆಂಟಿ ನಂತೆ ಇದ್ದುದನ್ನು ಕಂಡೆ. ನಾನು ಇದನ್ನು ಹಿಂದೆ ನೋಡಿದ್ದೂ ಇಲ್ಲ, ಓದಿದ್ದೂ ಇಲ್ಲ. ಐಆರ್ ಸಿಟಿಸಿಯವರು ಇಂಥದಕ್ಕೆ ಇಲ್ಲಿ ಹೇಗೆ ಅವಕಾಶ ನೀಡಿದರು?” ಎಂದು ಆ ಮಹಿಳೆ ಆ ಪ್ರಕಟಣೆಯ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.

ಇತರ ಪ್ರಯಾಣಿಕರೂ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಇದನ್ನು ರೈಲ್ವೆ ಕಂಪೆನಿಗಳವರು ಅಧಿಕೃತವಾಗಿ ಹಂಚಲು ವ್ಯವಸ್ಥೆ ಮಾಡಿದ್ದಾರೆಯೇ ಎಂಬ ಪ್ರಶ್ನಿಸಿದ್ದಾರೆ.

ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಐಆರ್ ಸಿಟಿಸಿ, ನಾನು ಸೂಕ್ತ ಕ್ರಮ ತೆಗೆದುಕೊಂಡುದಾಗಿ ಹೇಳಿತು.

“ಆರ್ಯವಾರ್ತ ಎಕ್ಸ್ ಪ್ರೆಸ್ ಎಂಬ ಸಪ್ಲಿಮೆಂಟ್ ಮಾದರಿಯ ಪತ್ರಿಕೆಯು ಇಂದು ರೈಲಿನ ಮಾಮೂಲಿ ದಿನಪತ್ರಿಕೆಗಳ ನಡುವೆ ಕಂಡು ಬಂದಿದೆ. ಇನ್ನು ಮುಂದೆ ಇಂಥ ಯಾವುದೇ ಸಪ್ಲಿಮೆಂಟರಿ ಪತ್ರಗಳಿಗೆ ಅವಕಾಶ ಕೊಟ್ಟರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪರವಾನಿಗೆದಾರರಿಗೆ ಎಚ್ಚರಿಸಲಾಗಿದೆ” ಎಂದು ಐಆರ್ ಸಿಟಿಸಿ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದೆ.

ರೈಲಿನಲ್ಲಿನ ಸಿಬ್ಬಂದಿಯೂ ಈ ಬಗೆಗೆ ಗಮನ ಕೊಡಬೇಕು. ಪರವಾನಿಗೆ ಪಡೆದವರಿಗೆ ತಿಳಿಹೇಳಬೇಕು ಎಂದು ಸಹ ಐಆರ್ ಸಿಟಿಸಿ ತಿಳಿಸಿತು.

ಪ್ರಯಾಣಿಕರಾದ ಭಕ್ಷಿ ಎಂಬವರು ಮರು ಟ್ವೀಟಿಸಿ “ಪ್ರತಿಕ್ರಿಯೆಗೆ ಧನ್ಯವಾದಗಳು. ಆದರೆ ಇದು ಖಂಡಿತವಾಗಿಯೂ ಸಪ್ಲಿಮೆಂಟ್ ಪ್ರತಿಯಲ್ಲ. ನಾನು ಬಂದಾಗ ನನ್ನ ಸೀಟು ಮತ್ತು ಇತರ ಸೀಟುಗಳಲ್ಲಿಯೂ ಇದು ಇರುವುದನ್ನು ಕಂಡೆ.” ಎಂದು ತಿಳಿಸಿದ್ದಾರೆ.

ಪರವಾನಿಗೆದಾರರನ್ನು ಕೌನ್ಸೆಲ್ ಅರ್ಥಾತ್ ಸಮಾಲೋಚನೆ ನಡೆಸಿದೆವು ಎಂಬ ಶಬ್ದವನ್ನು ಐಆರ್ ಸಿಟಿಸಿ ಬಳಸಿತ್ತು. ಇದರ ಬಗ್ಗೆ ಹಲವರು ಅಪಸ್ವರ ಎತ್ತಿದ್ದರಿಂದ ಐಆರ್ ಸಿಟಿಸಿ ಕೂಡಲೆ ಆ ಟ್ವೀಟ್ ಅಳಿಸಿ ಹಾಕಿತು. ಪರವಾನಿಗೆ ಇರುವ ಪತ್ರಿಕೆಗಳ ನಡುವೆ ಇಂಥ ಅನಧಿಕೃತ ಪ್ರತಿ ಹೇಗೆ ಬಂತು ಎಂದು ತನಿಖೆ ನಡೆಸಬೇಕೇ ಹೊರತು ಸಮಾಲೋಚನೆ ನಡೆಸುವುದಲ್ಲ ಎಂಬುದು ಹಲವರ ತಕರಾರಾಗಿತ್ತು.

ಈ ಕಾರಣಕ್ಕೆ ಆ ಟ್ವೀಟನ್ನು ಡಿಲೀಟ್ ಮಾಡಲಾಗಿದೆ ಹಾಗೂ ಕಂಪೆನಿಯು ಹೇಗೆ ಆ ಕಳ್ಳ ಹಾದಿಯ ಸಪ್ಲಿಮೆಂಟ್ ಬಂತು ಎಂಬ ಬಗ್ಗಗೆ ವಿಚಾರಣೆ ನಡೆಸುತ್ತಿದೆ ಎಂದೂ ಕಂಪೆನಿ ಮತ್ತೆ ತಿಳಿಸಿತು.

ಬೆಂಗಳೂರಿನ ವಿಭಾಗೀಯ ರೈಲ್ವೆ ನಿರ್ವಾಹಕರು ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. 

Join Whatsapp