ಬಂದೂಕುಧಾರಿಯಿಂದ ಹೋರಾಟಗಾರನ ಹತ್ಯೆ

Prasthutha|

ಬಗ್ದಾದ್: ಮುಸುಕುಧಾರಿಯೊಬ್ಬ ಇರಾಕ್ ಸರಕಾರ ವಿರೋಧಿ ಪ್ರತಿಭಟನಾಕಾರನೊಬ್ಬನನ್ನು ಗುಂಡಿಕ್ಕಿ ಕೊಂದ ಘಟನೆ ಮಂಗಳವಾರ ನಡೆದಿದೆ.

- Advertisement -

ಸರಕಾರವು ಭ್ರಷ್ಟ, ಅಸಮರ್ಥ ಮತ್ತು ನೆರೆಯ ಇರಾನ್ ಗೆ ನಿಷ್ಠವಾಗಿರುವುದನ್ನು ಖಂಡಿಸಿ ಇರಾಕ್ ನ ರಾಜಧಾನಿ ಮತ್ತು ದಕ್ಷಿಣದ ಶಿಯಾ ಬಾಹುಳ್ಯ ಪ್ರದೇಶದಲ್ಲಿ ಕಳೆದ ವರ್ಷ ಭುಗಿಲೆದ್ದ ರ್ಯಾಲಿಗಳಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಂಡ ಕಾರಣಕ್ಕಾಗಿ ಸಲಾಹ್ ಅಲ್ ಇರಾಕಿ ಜನಪ್ರಿಯನಾಗಿದ್ದರು.

ತಾಹೀರ್ ಸ್ಕ್ಯಾರ್ ನಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ಬಗ್ದಾದ್ ಅಲ್ ಜದೀದಾ ರಾಜಧಾನಿಯಲ್ಲಿ ನಡೆಯುವ ಪ್ರತಿಭಟನೆಗಳ ಕೇಂದ್ರಬಿಂದುವಾಗಿತ್ತು. ಸಲಾಹ್ ಇರಾಕಿ ಯಾವಾಗಲೂ ಉತ್ಸಾಹದಿಂದಿರುತ್ತಿದ್ದ ಮತ್ತು ಇಲ್ಲಿಂದ ವೀಡಿಯೊಗಳನ್ನು ನೇರಪ್ರಸಾರ ಮಾಡುತ್ತಿದ್ದರು. ಮಂಗಳವಾರ ಗುಂಡಿನ ದಾಳಿ ನಡೆಸುವುದಕ್ಕೆ ಮುಂಚೆ ಇರಾಕಿಯನ್ನು ಎರಡು ಬಾರಿ ಗುರಿ ಪಡಿಸಲಾಗಿತ್ತು.

- Advertisement -

ಮಂಗಳವಾರದಂದು ಫೇಸ್ಬುಕ್ ನಲ್ಲಿ ತನ್ನ ಕೊನೆಯ ಪೋಸ್ಟ್ ನಲ್ಲಿ ಇರಾಕಿ, “ಹೇಡಿಗಳ ಆಡಳಿತದಲ್ಲಿ ಅಮಾಯಕರು ಸಾಯುತ್ತಾರೆ” ಎಂದು ಬರೆದುಕೊಂಡಿದ್ದರು.

ಅಕ್ಟೋಬರ್ 2019ರಲ್ಲಿ ರ್ಯಾಲಿಗಳು ಆರಂಭಗೊಂಡ ನಂತರ ಪ್ರತಿಭಟನಾ ಸಂಬಂಧಿ ಹಿಂಸೆಗಳಲ್ಲಿ ಸುಮಾರು 600 ಸಾವನ್ನಪ್ಪಿದ್ದಾರೆ. ಅವರಲ್ಲಿ ಪ್ರತಿಭಟನೆಗಳನ್ನು ಸಂಘಟಿಸಿದ ಯುವ ಸಂಘಟಕರೂ ಒಳಗೊಂಡಿದ್ದಾರೆ.

ಬೀದಿ ಪ್ರತಿಭಟನೆಗಳ ಒತ್ತಡದ ಬಳಿಕ ಹಿಂದಿನ ಪ್ರಧಾನ ಮಂತ್ರಿಯಿಂದ ರಾಜೀನಾಮೆ ಕೊಡಿಸಿದ ಬಳಿಕ ಮುಸ್ತಫಾ ಅಲ್ ಕಧೇಮಿ ಆ ಸ್ಥಾನಕ್ಕೆ ಏರಿದ್ದರು. ರ್ಯಾಲಿಗಳನ್ನು ರಕ್ಷಿಸುವುದಾಗಿ ಮತ್ತು ಈ ಹಿಂದಿನ ಹಿಂಸೆಗಳ ಹೊಣೆಗಾರರನ್ನು ಬಂಧಿಸುವುದಾಗಿ ಅವರು ಭರವಸೆ ನೀಡಿದ್ದರು.

ಆದರೆ ಎಂಟು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಹಕ್ಕು ಗುಂಪುಗಳು ಈ ವರ್ಷ ನಡೆದ ಶಾಂತಿಯುತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವರ ಕಾನೂನು ಬಾಹಿರ ಕೊಲೆಗಳ ಕುರಿತು ಯಾವುದೇ ಹೊಣೆಗಾರಿಕೆಯಿಲ್ಲದಿರುವುದರ ಕುರಿತು ಆತಂಕ ವ್ಯಕ್ತ ಪಡಿಸಿದೆ.

Join Whatsapp