ಇರಾನ್: ಮಸೀದಿ ಬಳಿ ಅವಳಿ ಸ್ಫೋಟ; 103 ಮಂದಿ ಮೃತ್ಯು

Prasthutha|

ತೆಹ್ರಾನ್: ಸಾಹೇಬ್ ಅಲ್-ಝಮಾನ್ ಮಸೀದಿ ಬಳಿ ಅವಳಿ ಸ್ಫೋಟ ನಡೆದಿದೆ. ಯುಎಸ್ ಡ್ರೋನ್ ದಾಳಿಯಲ್ಲಿಮೃತಪಟ್ಟಿದ್ದ ದೇಶದ ಉನ್ನತ ಕಮಾಂಡರ್ ಖಾಸೆಮ್ ಅವರ ಪುಣ್ಯ ಸ್ಮರಣೆ ಆಚರಿಸಲು ಜನರು ಸಮಾರಂಭವನ್ನು ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಏಕಕಾಲದಲ್ಲಿ ಸಂಭವಿಸಿದ ಎರಡು ಸ್ಫೋಟಗಳಲ್ಲಿ 103 ಜನರು ಸಾವಿಗೀಡಾಗಿದ್ದು, 141 ಮಂದಿ ಗಾಯಗೊಂಡಿದ್ದಾರೆ. ಇರಾನ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

- Advertisement -

ಖಬರ್ ಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಹಲವಾರು ಗ್ಯಾಸ್ ಕ್ಯಾನಿಸ್ಟರ್‌ಗಳು ಸ್ಫೋಟಗೊಂಡಿವೆ. ಸ್ಥಳೀಯ ಅಧಿಕಾರಿಯೊಬ್ಬರು “ಸ್ಫೋಟಗಳು ಗ್ಯಾಸ್ ಸಿಲಿಂಡರ್‌ಗಳಿಂದ ಸಂಭವಿಸಿವೆಯೇ ಅಥವಾ ಭಯೋತ್ಪಾದಕ ದಾಳಿಯಿಂದ ಉಂಟಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ” ಎಂದು ಹೇಳಿರುವುದಾಗಿ ಇರಾನ್ ಸರ್ಕಾರಿ ಮಾಧ್ಯಮವು ಉಲ್ಲೇಖಿಸಿದೆ.

- Advertisement -

Join Whatsapp