ಬಿ.ಕೆ. ಹರಿಪ್ರಸಾದ್ ಹೇಳಿಕೆ ತನಿಖೆಯಾಗಲಿ: ಕೋಟ ಶ್ರೀನಿವಾಸ ಪೂಜಾರಿ

Prasthutha|

ಉಡುಪಿ: ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಮತ್ತೊಂದು ಗೋದ್ರಾ ದುರಂತ ನಡೆಯಬಹುದೆಂದು ಮಾಹಿತಿ ಸಿಕ್ಕಿದೆ ಎಂಬ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್‌ದ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

- Advertisement -

ಅನುಭವಿ ರಾಜಕಾರಣಿ ಹರಿಪ್ರಸಾದ್ ಮಾತಿನಂತೆ ಗೋದ್ರಾ ದುರಂತ ಮರುಕಳಿಸಿದರೆ ಅದಕ್ಕೆ ಶ್ರೀರಾಮ ಮಂದಿರ ನಿರ್ಮಾಣವನ್ನು ಹಿಂದಿನಿಂದಲೂ ವಿರೋಧಿಸುತ್ತಾ ಬಂದಿರುವ ಕಾಂಗ್ರೆಸ್‌ ನೇರ ಕಾರಣವಾಗಲಿದೆ ಎಂದು ಅವರು ಇದೇ ಸಂದರ್ಭ ಹೇಳಿದರು.

ರಾಮಮಂದಿರ ನಿರ್ಮಾಣಕ್ಕೆ ಸರ್ಕಾರದ ಹಣ ಬಳಕೆಯಾಗಿಲ್ಲ. ಸರಕಾರದ ನೇರ ಹಸ್ತಕ್ಷೇಪವೂ ಇಲ್ಲ. ಭಕ್ತರ ದೇಣಿಗೆಯಿಂದ ತಲೆ ಎತ್ತಿದೆ. ರಾಮಮಂದಿರ ಸಮಸ್ತ ಹಿಂದೂಗಳ ಮಂದಿರವಾಗಿದೆ. ಕೆಲವರು ರಾಜಕೀಯ ಕಾರಣಕ್ಕೆ ಬಿಜೆಪಿ ರಾಮಮಮಂದಿರವನ್ನು ಟೀಕಿಸುತ್ತಿದ್ದಾರೆ ಎಂದರು.

- Advertisement -

Join Whatsapp