ದಿಗ್ಬಂಧನ ರದ್ದುಗೊಳಿಸಿದರೆ ಪರಮಾಣು ಒಪ್ಪಂದಕ್ಕೆ ಮತ್ತೆ ಸೇರಲು ಸಿದ್ಧ: ಇರಾನ್ ವಿದೇಶಾಂಗ ಸಚಿವ

Prasthutha|

ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಟೆಹ್ರಾನ್ ಮೇಲಿನ ದಿಗ್ಬಂಧನವನ್ನು ರದ್ದುಗೊಳಿಸಿದರೆ ಇರಾನ್ 2015ರ ಪರಮಾಣು ಒಪ್ಪಂದವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಿದೆ ಎಂದು ಇರಾನ್ ವಿದೇಶಾಂಗ ಸಚಿವ ಮುಹಮ್ಮದ್ ಜಾವದ್ ಝರೀಫ್ ಹೇಳಿದ್ದಾರೆ. “ಮೂರು ಕಾರ್ಯನಿರ್ವಾಹಕ ಆದೇಶಗಳ” ಮೂಲಕ ಬೈಡನ್ ದಿಗ್ಬಂಧನ ಹಿಂದೆಗೆಯಬಹುದು ಎಂದು ಝರೀಫ್ ಹೇಳಿದ್ದಾರೆ.

- Advertisement -

ಪಿ5 + 1 ಎಂದು ಕರೆಯಲ್ಪಡುವ ಆರು ಜಾಗತಿಕ ಶಕ್ತಿಗಳು ಸಮ್ಮತಿಸಿರುವ ಐತಿಹಾಸಿಕ 2015ರ ಒಪ್ಪಂದವನ್ನು ಇರಾನ್ ಅಂಗೀಕರಿಸಿದರೆ ತಾನು ಮತ್ತೆ ಸೇರಿಕೊಳ್ಳುವುದಾಗಿ ಬೈಡೆನ್ ಹೇಳಿದ್ದರು.

ಈ ಹಿಂದೆ ಅಧ್ಯಕ್ಷ ಹಸನ್ ರೂಹಾನಿ ಒತ್ತಾಯಿಸಿರುವಂತೆ ಝರೀಫ್ ಒಪ್ಪಂದಕ್ಕೆ ಮರುಸೇರಲು ಅಮೆರಿಕಾದಿಂದ ಯಾವುದೇ ಪರಿಹಾರವನ್ನು ಕೋರಿಲ್ಲ. ರೂಹಾನಿ, ಅಮೆರಿಕಾದ  ಪರಿಷ್ಕೃತ ದಿಗ್ಬಂಧನದಿಂದ ಟೆಹ್ರಾನ್ ಹಾನಿಗೊಳಗಾಗಿದ್ದು, ಈ ಕಾರಣಕ್ಕಾಗಿ ತಾನು ತೈಲ ಆದಾಯವನ್ನು ಕಳೆದುಕೊಂಡಿರುವುದರಿಂದ ಒಪ್ಪಂದಕ್ಕೆ ಸೇರಿಕೊಳ್ಳಬೇಕಾದರೆ ವಾಷಿಂಗ್ಟನ್ ನಷ್ಟ ಪರಿಹಾರವನ್ನು ನೀಡಬೇಕೆಂದು ಕೇಳಿದ್ದರು.

- Advertisement -

“ಅಮೆರಿಕಾದ ಬದ್ಧತೆಯನ್ನು ಬೈಡನ್ ನೆರವೇರಿಸುವುದಾದರೆ, ಒಪ್ಪಂದಕ್ಕೆ ಸಂಬಂಧಿಸಿದಂತೆ ನಮ್ಮ ಬದ್ಧತೆಗೆ ನಾವು ತಕ್ಷಣವೇ ಮರಳಬಹುದು…ಮತ್ತು ಪಿ5+1 ಚೌಕಟ್ಟಿನೊಳಗೆ ಮಾತುಕತೆಗಳು ಸಾಧ್ಯ” ಎಂದು ಝರೀಫ್ ಇರಾನ್ ಸರಕಾರದ ವೆಬ್ ಸೈಟ್ ಬುಧವಾರ ಪ್ರಕಟಿಸಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

“ಅಮೆರಿಕಾವು ಒಪ್ಪಂದಕ್ಕೆ ಹೇಗೆ ಮರುಪ್ರವೇಶಿಸಬಹುದೆಂದು ಚರ್ಚಿಸಲು ನಾವು ಸಿದ್ಧರಿದ್ದೇವೆ. ಮುಂದಿನ ಕೆಲವು ತಿಂಗಳಲ್ಲಿ ಪರಿಸ್ಥಿತಿ ಅಭಿವೃದ್ಧಿಗೊಳ್ಳಲಿದೆ. ಬೈಡನ್ ಮೂರು ಕಾರ್ಯನಿರ್ವಾಹಕ ಆದೇಶಗಳ ಮೂಲಕ ದಿಗ್ಬಂಧನವನ್ನು ರದ್ದುಗೊಳಿಸಬಹುದು” ಎಂದು ಝರೀಫ್ ಹೇಳಿದರು.



Join Whatsapp