ಕೊರೊನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಬಿಜೆಪಿ ಕಾರ್ಯಕರ್ತನಿಂದ ಲೈಂಗಿಕ ಕಿರುಕುಳ

Prasthutha|

ತಿರುವನಂತಪುರಂ : ಕೊರೊನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮೇಲೆ ಕೇರಳದ ಬಿಜೆಪಿ ಕಾರ್ಯಕರ್ತನೂ ಆಗಿರುವ, ಆಸ್ಪತ್ರೆ ಸಿಬ್ಬಂದಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಕೇರಳದ ಬಾಲುಶ್ಶೇರಿ ಮೊಡಕೊಲ್ಲೂರು ವೈದ್ಯಕೀಯ ಕಾಲೇಜಿನ ಸಿಬ್ಬಂದಿಯಾದ ಎಡಕ್ಕರ ವೆಲ್ಲನಾಬತ್ ಮೂಲದ ಕೃಷ್ಣ ಎಂಬಾತ ಈ ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿದೆ. ಬಿಜೆಪಿಯ ಸೈಬರ್ ಸೆಲ್ ಸಕ್ರಿಯ ಸದಸ್ಯನಾದ ಕೃಷ್ಣ ಪಿಪಿಇ ಕಿಟ್ ಧರಿಸಿಕೊಂಡು ಬಂದು ಸಂತ್ರಸ್ತೆ ಮಹಿಳೆಯನ್ನು ತನ್ನೊಂದಿಗೆ ಬರುವಂತೆ ವೈದ್ಯರು ತಿಳಿಸಿದ್ದಾರೆಂದು ಸುಳ್ಳು ಹೇಳಿ ಕರೆದೊಯ್ದಿದ್ದ.

- Advertisement -

ಅಲ್ಲಿಂದ ಖಾಲಿ ಕೋಣೆಯೊಂದಕ್ಕೆ ಕರೆದೊಯ್ದು ಆರೋಪಿಯು ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿಯ ಕೈಯಿಂದ ತಪ್ಪಿಸಿಕೊಂಡು ಬಂದ ಮಹಿಳೆಯು ವಿಷಯವನ್ನು ಇತರರಿಗೆ ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಅಥೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -