IPL 2021 ವೈಯಕ್ತಿಕ ಪ್ರಶಸ್ತಿ ವಿಜೇತರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

Prasthutha|

ದುಬೈ ; ಇಂಡಿಯನ್ ಪ್ರೀಮಿಯರ್ ಲೀಗ್​ -ಐಪಿಎಲ್ 14ನೇ ಆವೃತ್ತಿಗೆ ತೆರೆ ಬಿದಿದ್ದು, ಚೆನ್ನೈ ಸೂಪರ್ ಕಿಂಗ್ಸ್​ ನಾಲ್ಕನೆಯ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ – ಕೆಕೆಆರ್ ತಂಡವನ್ನು 27 ರನ್​ಗಳಿಂದ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಚೆನ್ನೈ ಚಾಂಪಿಯನ್ ಪಟ್ಟಕ್ಕೇರಿದೆ.

- Advertisement -

ಐಪಿಎಲ್ ಟೂರ್ನಿಯ ಪ್ರಮುಖ ವಿಶೇಷತೆಯೆಂದರೆ ಆಕರ್ಷಕ ಚಾಂಪಿಯನ್ ಟ್ರೋಫಿಯ ಜೊತೆಗೆ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ಹಲವಾರು ವೈಯಕ್ತಿಕ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ.

IPL-2021 ಸೀಸನ್’ನ ವಿಶೇಷ ವೈಯಕ್ತಿಕ ಪ್ರಶಸ್ತಿಗಳನ್ನು ನೋಡುವುದಾದರೆ….

- Advertisement -

ಆರೆಂಜ್ ಕ್ಯಾಪ್ – ಋತುರಾಜ್ ಗಾಯಕ್ವಾಡ್

ಟೂರ್ನಿಯಲ್ಲಿ ಅತೀ ಹೆಚ್ಚು ರನ್’ಗಳಿಸಿದ ಆಟಗಾರ ಪಡೆಯುವ ಆರೆಂಜ್ ಕ್ಯಾಪ್ ಪ್ರಶಸ್ತಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ತನ್ನದಾಗಿಸಿಕೊಂಡಿದ್ದಾರೆ.
ಒಟ್ಟು 16 ಪಂದ್ಯಗಳಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಾತಕಗಳ ನೆರವಿನಿಂದ ಗಾಯಕ್ವಾಡ್ ಒಟ್ಟು 635 ರನ್”ಗಳನ್ನು ಕಲೆಹಾಕಿದ್ದಾರೆ.
ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದ ಓಪನಿಂಗ್ ಪಾಟ್ನರ್ ಫಾಪ್ ಡುಪ್ಲೆಸ್ಸಿ ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ 86 ರನ್ ಗಳಿಸಿದರೂ, ಕೇವಲ ಎರಡು ರನ್’ಗಳ ಅಂತರದಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಆರೆಂಜ್ ಕ್ಯಾಪ್ ಜೊತೆಗೆ IPL-14ನೇ ಆವೃತ್ತಿಯ “ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್ ” ಪ್ರಶಸ್ತಿಯು ಕೂಡ ಗಾಯಕ್ವಾಡ್ ಪಾಲಾಗಿದೆ.
ಈ ಬಾರಿ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರರೇ ಆಗಿರುವುದು ವಿಶೇಷ.

ಹರ್ಷಲ್ ಪಟೇಲ್:

ಪರ್ಪಲ್ ಕ್ಯಾಪ್, ಗೇಮ್ ಚೇಂಜರ್ ಆಫ್ ದಿ ಸೀಸನ್ ಹಾಗೂ ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್ ಆಫ್ ದಿ ಸೀಸನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲಿಮಿನೇಟರ್ ಹಂತದಲ್ಲಿ ಟೂರ್ನಿಯಿಂದ ಹೊರನಡೆದರೂ ಸಹ ಅತೀ ಹೆಚ್ಚು ವಿಕೆಟ್ ಪಡೆದವರಿಗೆ ನೀಡಲಾಗುವ ಆರೆಂಜ್ ಕ್ಯಾಪ್ ಪ್ರಶಸ್ತಿಯು ಆರ್’ಸಿಬಿಯ ಹರ್ಷಲ್ ಪಟೇಲ್ ಪಾಲಾಯಿತು.
15 ಪಂದ್ಯಗಳಲ್ಲಿ 32 ವಿಕೆಟ್ ಪಡೆಯುವ ಮೂಲಕ ಪಟೇಲ್ ಬೌಲಿಂಗ್‌ನಲ್ಲಿ ಮಿಂಚು ಹರಿಸಿದ್ದರು.
16 ಪಂದ್ಯಗಳಲ್ಲಿ 24 ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆವೇಶ್ ಖಾನ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ.

ಈ ಸೀಸನ್‌ನಲ್ಲಿ ಹರ್ಷಲ್ ಪಂದ್ಯವೊಂದರಲ್ಲಿ 5 ವಿಕೆಟ್ ಹಾಗೂ ಇನ್ನೊಂದು ಪಂದ್ಯದಲ್ಲಿ 4 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ
ಪರ್ಪಲ್ ಕ್ಯಾಪ್ ಜೊತೆಗೆ ಪಂದ್ಯದ ಗತಿಯನ್ನೇ ಬದಲಾಯಿಸಿದ ಆಟಗಾರನಿಗೆ ನೀಡುವ ಗೇಮ್ ಚೇಂಜರ್ ಆಫ್ ದಿ ಸೀಸನ್ ಹಾಗೂ ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿಗಳನ್ನು ಕೂಡ ಹರ್ಷಲ್ ಪಟೇಲ್ ತನ್ನದಾಗಿಸಿಕೊಂಡಿದ್ದಾರೆ.

ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್‌- ಶಿಮ್ರೋನ್ ಹೇಟ್ಮೆಯರ್.
ಐಪಿಎಲ್’ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ
‘ಸೂಪರ್ ಸ್ಟ್ರೈಕರ್​ ಆಫ್ ದಿ‌ ಸೀಸನ್’ ಪ್ರಶಸ್ತಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಶಿಮ್ರಾನ್ ಹೆಟ್ಮೆಯರ್ ಪಾಲಾಗಿದೆ. 14 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಹೆಟ್ಮೆಯರ್ 168 ಸ್ಟ್ರೈಕ್’ರೇಟ್’ನಲ್ಲಿ
ಒಟ್ಟು 242 ರನ್​ಗಳಿಸಿದ್ದರು. ಆ ಮೂಲಕ ಎಲ್ಲರ ಗಮನ ಸೆಳೆದಿದ್ದ ಬ್ರ್ಯಾಂಡ್ ನ್ಯೂ ಸಫಾರಿ ಕಾರು ವೆಸ್ಟ್ ಇಂಡೀಸ್​ ದಾಂಡಿಗನ ಪಾಲಾಗಿದೆ.

ಪವರ್ ಪ್ಲೇಯರ್ ಆಫ್ ದಿ ಸೀಸನ್
ಪವರ್​ಪ್ಲೇ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆಟಗಾರನಿಗೆ ನೀಡಲಾಗುವ ಪವರ್​ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿ ಕೆಕೆಆರ್ ತಂಡದ ವೆಂಕಟೇಶ್ ಅಯ್ಯರ್ ಪಡೆದಿದ್ದಾರೆ.

ಕ್ಯಾಚ್ ಆಪ್ ದಿ ಸೀಸನ್ – ರವಿ ಬಿಷ್ಣೋಯ್
ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಕ್ಯಾಚ್​ಗೆ ನೀಡಲಾಗುವ ಕ್ಯಾಚ್ ಆಫ್ ದಿ ಸೀಸನ್​ ಅವಾರ್ಡ್​- ಪ್ರಶಸ್ತಿಯು ಈ ಬಾರಿ ಪಂಜಾಬ್ ಕಿಂಗ್ಸ್​ ತಂಡದ ರವಿ ಬಿಷ್ಣೋಯ್ ಅವರು ಪಡೆದಿದ್ದಾರೆ.
ಅಹ್ಮದಾಬಾದ್ ನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸುನಿಲ್ ನರೇನ್ ಬ್ಯಾಟ್’ನಿಂದ ಬಂದ ಚೆಂಡನ್ನು ಮಿಡ್ ವಿಕೆಟ್’ನಲ್ಲಿ ಅದ್ಭುತ ಡೈವ್ ಮಾಡುವ ಮೂಲಕ ರವಿ ಬಿಷ್ಣೊಯ್ ಕ್ಯಾಚ್ ಪಡೆದಿದ್ದರು.

ಮೋಸ್ಟ್ ಸಿಕ್ಸಸ್ – ಕೆ.ಎಲ್.ರಾಹುಲ್
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತೀ ಹೆಚ್ವು
ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಆಟಗಾರನಿಗೆ ನೀಡಲಾಗುವ ಪ್ರಶಸ್ತಿ, ಕೆಎಲ್ ರಾಹುಲ್ ಪಾಲಾಗಿದೆ.
13 ಪಂದ್ಯಗಳಲ್ಲಿ 30 ಸಿಕ್ಸರ್ ಗಳನ್ನು ಸಿಡಿಸಿದ ರಾಹುಲ್, ಒಟ್ಟು 626ಗಳನ್ನು ಗಳಿಸಿ ಟಾಪ್ ಸ್ಕೋರರ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರು.

ಪ್ಲೇಯರ್ ಆಫ್ ದಿ ಮ್ಯಾಚ್ – ಪಾಫ್ ಡುಪ್ಲೆಸ್ಸಿ
ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟಕ್ಕೇರಲು ಈ ಬಾರಿ ಬ್ಯಾಟ್ ಹಾಗೂ ಫೀಲ್ಡ್ ಮೂಲಕ ಶ್ರೇಷ್ಠ ಕೊಡುಗೆ ನೀಡಿದ್ದ ಪಾಫ್ ಡುಪ್ಲೆಸ್ಸಿ ಫೈನಲ್ ಪಂದ್ಯದ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದಿದ್ದಾರೆ.
ಫೈನಲ್ ಪಂದ್ಯದಲ್ಲಿ 59 ಎಸೆತಗಳನ್ನು ಎದುರಿಸಿದ ಡುಪ್ಲೆಸ್ಸಿ, 3 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ ಆಕರ್ಷಕ 86 ರನ್’ಗಳಿಸಿ ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಅಯ್ಯರ್’ಗೆ ಕ್ಯಾಚಿತ್ತು ನಿರ್ಗಮಿಸಿದ್ದರು.


ಫೇರ್ ಪ್ಲೇ ಅವಾರ್ಡ್
ಐಪಿಎಲ್’ನಲ್ಲಿ ಕ್ರೀಡಾಸ್ಪೂರ್ತಿಯಿಂದ ಆಡಿದ ತಂಡಕ್ಕೆ ನೀಡುವ ಫೇರ್​ ಪ್ಲೇ ಅವಾರ್ಡ್​​- ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಲಭಿಸಿದೆ.

Join Whatsapp