ಬೆಂಗಳೂರು: 1923ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಗೆ ಸಲ್ಲಿಸಿದ ” ದ ಪ್ರಾಬ್ಲಮ್ ಆಫ್ ದಿ ರುಪೀ” ಮಹಾಕೃತಿಗೆ ಈಗ ನೂರು ವರ್ಷದ ಸಂಭ್ರಮ. 1935ರಲ್ಲಿ ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬರಲು ಮೂಲ ಕಾರಣವಾದ ಈ ಮೇರು ಕೃತಿಯ ನೂರರ ನೆನಪಿನಲ್ಲಿ ಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಅಂಬೇಡ್ಕರ್ ಎಕನಾಮಿಕ್ಸ್ ಫೌಂಡೇಶನ್ ಸಂಸ್ಥಾಪಕ ಡಾ. ಎಚ್.ಎನ್.ದೇವಾನಂದ್ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಇಡೀ ವರ್ಷ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಫೆಬ್ರವರಿ 25ರಂದು ಸೆಂಟ್ರಲ್ ಕಾಲೇಜಿ ಆವರಣದಲ್ಲಿರುವ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡುತ್ತಿದ್ದು, ಅಂದು ದೇಶದ ಅನೇಕ ಭಾಗಗಳಿಂದ ಆರ್ಥಿಕ ತಜ್ಞರು, ಸಂಶೋಧಕರು, ಚಿಂತಕರು ವಿಚಾರ ಮಂಡನೆ ಮಾಡುತ್ತಿದ್ದಾರೆ ಎಂದರು. ಬೆಂಗಳೂರಿನ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಖುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಶಿವರಾಂ ಮಾತನಾಡಿ, ಅಂದಿನ ವಿಚಾರ ಸಂಕಿರಣದಲ್ಲಿ ಸಚಿವರಾದ ಡಾ.ಅಶ್ವತ್ಥನಾರಾಯಣಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಅರ್ಥಶಾಸ್ತ್ರಜ್ಞ ಡಾ.ಸುಖದೇವ್ ಥೋರಟ್, ಮಾಜಿ ಸಚಿವರಾದ ಡಾ.ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆ, ಡಾ.ಹೆಚ್.ಸಿ.ಮಹದೇವಪ್ಪ, ಕುಲಪತಿಗಳಾದ ಡಾ.ಲಿಂಗರಾಜಗಾಂಧಿ, ಡಾ. ಜಯಕರ್, ಎಸ್.ಎಂ ಮುಂತಾದವರು ಭಾಗವಹಿಸುತ್ತಿದ್ದು, ಹಲವಾರು ಸಂಸ್ಥೆಗಳು ಕಾರ್ಯಕ್ರಮದ ಆಯೋಜನೆಯಲ್ಲಿ ನೆರವಾಗುತ್ತಿದ್ದಾರೆ ಎಂದರು. ಸಂಕಿರಣದ ಸಹ
ಡಾ.ಅಂದಾನಿ ಹಾಗೂ ನಾಗರಾಜಯ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ನಾಳೆ ಡಾ.ಬಿ.ಆರ್.ಅಂಬೇಡ್ಕರ್ ಆರ್ಥಿಕ ಚಿಂತನೆ ಮತ್ತು ಕೊಡುಗೆ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ
Prasthutha|