ಏಕೀಕರಣ ಹೋರಾಟಗಾರ, ಮಾಜಿ ಎಂಎಲ್​’ಸಿ ಮಾರುತಿರಾವ್‌ ಮಾಲೆ ನಿಧನ

Prasthutha|

ಕಲಬುರಗಿ: ಮಾಜಿ ವಿಧಾನಪರಿಷತ್ ಸದಸ್ಯ, ರಾಷ್ಟ್ರ ಏಕೀಕರಣ ಹೋರಾಟಗಾರ ಮಾರುತಿರಾವ್ ಡಿ. ಮಾಲೆ ಅವರು ನಿಧನರಾಗಿದ್ದಾರೆ.

- Advertisement -

ಮಾಲೆ ಕಳೆದ ಕೆಲ‌ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಮೂಲತಃ ಬೀದರ್ ಜಿಲ್ಲೆಯ ಘಾಟಬೊರಾಳ್ ಗ್ರಾಮದ ನಿವಾಸಿ, 83 ವರ್ಷದ ಮಾರುತಿರಾವ್ ಡಿ. ಮಾಲೆ ಅವರು ಶೀಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇವರ ಅಂತ್ಯಕ್ರಿಯೆ ಇಂದು ಕಲಬುರಗಿ ಜಿಲ್ಲೆಯ ಹಾರುತಿ ಹಡಗಿಲ್ ಗ್ರಾಮದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಅಂತ್ಯಕ್ರಿಯೆಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಸೇರಿದಂತೆ ಇತರೆ ರಾಜಕೀಯ ನಾಯಕರು ಭಾಗಿಯಾಗಲಿದ್ದಾರೆ.

ಮಾರುತಿರಾವ್ ಡಿ. ಮಾಲೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದರು.

Join Whatsapp