ಸ್ವಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ಹೊರಹಾಕಿದ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ

Prasthutha|

ಶಿವಮೊಗ್ಗ: ಮಾಜಿ ಸಿಎಂ ದಿವಂಗತ ಎಸ್ ಬಂಗಾರಪ್ಪನವರ ಸ್ಮರಣ ಕಾರ್ಯಕ್ರಮದಲ್ಲಿ ಮಂಗಳವಾರ ಲಿಂಬಾವಳಿ ಭಾಗಿಯಾಗಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ದಿವಂಗತ ಬಂಗಾರಪ್ಪನವರನ್ನು ಹೊಗಳುತ್ತಲೇ ಬಿಜೆಪಿ ಪಕ್ಷದ ನಾಯಕರಾದ ಬಿಎಸ್ ವೈ ಮತ್ತು ಈಶ್ವರಪ್ಪ ಸೇರಿದಂತೆ ಹಲವು ನಾಯಕರು ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಬಂಗಾರಪ್ಪನವರು ಬಿಜೆಪಿಯಲ್ಲಿದ್ದಾಗ ಕೋ-ಆರ್ಡಿನೇಟರ್ ಆಗಿ ಜೊತೆಯಲ್ಲಿದ್ದರು. ಆದರೆ ಸ್ವಾಭಿಮಾನಕ್ಕೆ ಧಕ್ಕೆ ಬರುವ ಕಡೆ ಬಂಗಾರಪ್ಪ ಇರುತ್ತಿರಲಿಲ್ಲ. ನಮ್ಮ‌ ಬಿಜೆಪಿ ಪಕ್ಷದವರು ಸ್ವಾಭಿಮಾನಕ್ಕೆ ಧಕ್ಕೆ ತರುವುದು ಹೆಚ್ಚು. ಹಾಗಾಗಿ ಬಂಗಾರಪ್ಪನವರು ಪಕ್ಷ ತೊರೆದು ಹೋದರು ಎಂದು ಸ್ವಪಕ್ಷದ ಮುಖಂಡರ ನಡವಳಿಕೆ ವಿರುದ್ಧವೇ ಮಾಜಿ ಸಚಿವ ಅರವಿಂದ ಲಿಂಬಾವಳಿ ಅಸಮಾಧಾನ ಹೊರಹಾಕಿದರು.

ಬಂಗಾರಪ್ಪರನ್ನು ಹೊಗಳಿದ ಲಿಂಬಾವಳಿ, ಸಾಮಾನ್ಯ ಕಾರ್ಯಕರ್ತರ ಬಗ್ಗೆನೂ ಯೋಚನೆ ಮಾಡುವ ಧೀಮಂತ ನಾಯಕರಾಗಿದ್ದ ಬಂಗಾರಪ್ಪ. ಅಂದು ಸಾಮಾನ್ಯವಾಗಿ 44 ಬಿಜೆಪಿ ನಿಲ್ಲುತ್ತಿತ್ತು. ಬಂಗಾರಪ್ಪ ಬಿಜೆಪಿಗೆ ಬಂದ ನಂತರ 79 ಕ್ಕೆ ಏರಿಕೆ ಆಯ್ತು. ಜೆಡಿ ಯು ಜೊತೆ 86 ಕ್ಕೆ ಏರಿಕೆ ಆಯ್ತು. ಬಂಗಾರಪ್ಪ ಅವರು 1980 ಯಲ್ಲಿಯೇ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ನೇರ ನುಡಿಯಿಂದ ಸಿಎಂ ಸ್ಥಾನ ತಪ್ಪಿಹೋಗಿತ್ತು ಎಂದು ಹೇಳಿದರು.

- Advertisement -

ಇದೇ ವೇಳೆ ಕಾರ್ಯಕ್ರಮದಲ್ಲಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದಾರೆ. ಪಕ್ಷದ ಹೊರಗೆ ಕಾಲಿಟ್ಟಿದ್ದಾರೇನೋ ಎಂಬ ಅನುಮಾನ ವ್ಯಕ್ತವಾಗಿದೆ. ಹಾಗೇನಾದರೂ ಇದ್ದರೆ ಅವರಿಗೆ ಒಳ್ಳೆಯದಾಗಲಿ ಎಂದು ನಗೆ ಚಟಾಕಿ ಹಾರಿಸಿದರು.

Join Whatsapp