ಪ್ರವಾದಿ ಮುಹಮ್ಮದ್ ರನ್ನು ಅವಮಾನಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ; ರಷ್ಯಾ ಅಧ್ಯಕ್ಷ ಪುತಿನ್

Prasthutha|

ಮಾಸ್ಕೊ: ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಪರಿಗಣಿಸುವುದಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

- Advertisement -

ಪ್ರವಾದಿಯನ್ನು ಅವಮಾನಿಸುವುದು “ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಮತ್ತು ಇಸ್ಲಾಮ್ ಧರ್ಮವನ್ನು ಪ್ರತಿಪಾದಿಸುವ ಜನರ ಭಾವನೆಗಳ ಉಲ್ಲಂಘನೆಯಾಗಿದೆ ಎಂದು ಪುತಿನ್ ತಿಳಿಸಿದರು.

ಮಾತ್ರವಲ್ಲ ಎರಡನೇ ಮಹಾಯುದ್ಧದಲ್ಲಿ ಮಡಿದ ರಷ್ಯನ್ನರಿಗೆ ಮೀಸಲಾದ ಅಮರ್ ರೆಜಿಮೆಂಟ್ ನಂತಹ ವೆಬ್ ಸೈಟ್ ಗಳಲ್ಲಿ ನಾಜಿಗಳ ಫೋಟೋಗಳನ್ನು ಹಾಕಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ ನಂತರ ಪ್ಯಾರಿಸ್ ನ ಚಾರ್ಲಿ ಹೆಬ್ಡೋ ನಿಯತಕಾಲಿಕದ ಕಚೇರಿಯ ಮೇಲೆ ದಾಳಿಯಂತಹ ಕೃತ್ಯಕ್ಕೆ ಇಂತಹ ವಿಷಯಗಳು ಕಾರಣವಾಗುತ್ತವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಕಲಾತ್ಮಕ ಸ್ವಾತಂತ್ರ್ಯವನ್ನು ಶ್ಲಾಘಿಸಿದರೂ, ಅದು ಮಿತಿ ಮೀರಬಾರದು ಎಂದು ಎಚ್ಚರಿಸಿದರು. ಇಂತಹ ಬೆಳವಣಿಗೆಗಳು ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.

Join Whatsapp