ಇನ್ಫೋಸಿಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ರವಿಕುಮಾರ್ ಎಸ್

Prasthutha|

ಬೆಂಗಳೂರು: ಪ್ರಮುಖ ಭಾರತೀಯ ಐಟಿ ಸಂಸ್ಥೆಗಳಲ್ಲೊಂದಾದ ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ಎಸ್ ರಾಜೀನಾಮೆ ನೀಡಿದ್ದಾರೆ.

- Advertisement -

ರವಿ ಕುಮಾರ್ ಅವರು ಸಂಸ್ಥೆಯ ಹುದ್ದೆಗೆ ರಾಜೀನಾಮೆ ನೀಡಲು ನಿಖರ ಕಾರಣವೇನು ಎಂಬುವುದರ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ ಎನ್ನಲಾಗಿದೆ.

ರವಿ ಕುಮಾರ್ ಇನ್ಫೋಸಿಸ್ ಕಾರ್ಯನಿರ್ವಾಹಕ ಮಂಡಳಿಯ ಭಾಗವಾಗಿ, ಸಲಹೆಗಳನ್ನು ನೀಡುತ್ತಾ ಕಂಪನಿಯನ್ನು ಯಶಸ್ವಿಯಾಗಿಸುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಿದ್ದಾರೆ.

- Advertisement -

ಕಂಪನಿಗೆ ರವಿಕುಮಾರ್ ಅವರು ನೀಡಿದ ಕೊಡುಗೆಗಳಿಗೆ ಇನ್ಫೋಸಿಸ್ ನಿರ್ದೇಶಕರ ಮಂಡಳಿಯು ತಮ್ಮ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ ಎಂದು ಇನ್ಫೋಸಿಸ್ ಪ್ರಕಟಣೆಯಲ್ಲಿ ತಿಳಿಸಿದೆ.



Join Whatsapp