ದೇಶದ ಆರ್ಥಿಕ ಕುಸಿತಕ್ಕೆ ಕೊರೋನಾ ಕಾರಣವಲ್ಲ । ಲಾಕ್ ಡೌನಿಗಿಂತಲೂ ಮೊದಲೇ ಕುಸಿತದ ಹಾದಿಯಲ್ಲಿತ್ತು

Prasthutha: September 2, 2020

►► ಅಂಕಿ ಅಂಶಗಳ ವರದಿಯಲ್ಲಿ ಬಹಿರಂಗ

ನವದೆಹಲಿ : ದೇಶದ ಆರ್ಥಿಕತೆ ದಶಕಗಳಷ್ಟು ಹಿಂದಕ್ಕೆ ಹೋದ ಬಗ್ಗೆ ಈಗ ಎಲ್ಲರಿಗೂ ಗೊತ್ತಾಗಿದೆ. ಅದಕ್ಕೆ ಕೊರೋನ ಲಾಕ್ ಡೌನ್ ನ ಕಾರಣ ನೀಡಲಾಗುತ್ತಿದೆ. ಆದರೆ, ಕೊರೋನ ಲಾಕ್ ಡೌನ್ ಗಿಂತ ಮೊದಲೇ ದೇಶದ ಆರ್ಥಿಕತೆ ಇಳಿಕೆಯ ಹಾದಿಯಲ್ಲಿತ್ತು ಎಂಬುದನ್ನು ಬಹುತೇಕರು ಮರೆತಿದ್ದಾರೆ. ದೇಶದ ಆರ್ಥಿಕತೆಯನ್ನು ಮೇಲಕ್ಕೆತ್ತಲಾಗದೆ ಪರದಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ, ಕೋವಿಡ್ ಲಾಕ್ ಡೌನ್ ನ ನೆಪ ವರದಾನವಾಗಿ ಪರಿಣಮಿಸಿದೆ. ಆದರೆ, ಕೊರೋನ ಲಾಕ್ ಡೌನ್ ನಿರ್ವಹಣೆಯಲ್ಲಿನ ವೈಫಲ್ಯ ಹಾಗೂ ಈಗಾಗಲೇ ಅಧಃಪತನದತ್ತ ಸಾಗುತ್ತಿದ್ದ ದೇಶದ ಆರ್ಥಿಕತೆಯನ್ನು ಸುಧಾರಿಸಲು ಸಾಧ್ಯವಾಗದ ಬಿಜೆಪಿ ಸರಕಾರದ ಹೊಣೆಗೇಡಿತನವನ್ನು ಮುಚ್ಚಿಡಲಾಗದು.

ಕೊರೋನ ಲಾಕ್ ಡೌನ್ ಸಂದರ್ಭವಾದ ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ದೇಶದ ಜಿಡಿಪಿ 40 ವರ್ಷಗಳಷ್ಟು ಹಿಂದಕ್ಕೆ ಸರಿದಿತ್ತು ವರದಿಯಾಗಿದೆ. ಆದರೆ ಅದಕ್ಕೂ ಮೊದಲೇ 2017ರ ಹಣಕಾಸು ವರ್ಷದಿಂದ 2020ರ ಹಣಕಾಸು ವರ್ಷದ ವರೆಗೂ ಆರ್ಥಿಕತೆ ಇಳಿಕೆ ಕಾಣುತ್ತಲೇ ಸಾಗಿದೆ. ದೇಶದ ಜಿಡಿಪಿ ಕುಸಿತದ ಹಾದಿತಲ್ಲಿತ್ತು ಎಂದು ವರದಿಯೊಂದು ತಿಳಿಸಿದೆ. FY20 Q4 ನಲ್ಲಿ 11 ವರ್ಷಗಳ ಹಳೆಯ ದಾಖಲೆಯ ಇಳಿಕೆ ಕಂಡಿತ್ತು. ಆ ಅವಧಿಯಲ್ಲಿ 3.1 ಶೇ. ಕುಸಿತ ವರದಿಯಾಗಿತ್ತು.

ಕೊರೋನ ಸೋಂಕಿನ ಸಂಕಷ್ಟ ಆರಂಭಕ್ಕೂ ಮೊದಲೇ ಕೈಗಾರಿಕೋದ್ಯಮ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಿತ್ತು. ಕಳೆದ ವರ್ಷದ ಡಿಸೆಂಬರ್ ನಲ್ಲಿ ತೆರಿಗೆ ಸಂಗ್ರಹದಲ್ಲಿ ಏರಿಕೆ ಕಂಡಿದ್ದರೂ, ಉತ್ಪಾದನೆಯಲ್ಲಿ ಇಳಿಕೆ ಕಂಡಿತ್ತು. ಐಶಾರಾಮಿ ವಸ್ತುಗಳ ಬಳಕೆಯಲ್ಲೂ ಈ ಅವಧಿಯಲ್ಲಿ ಇಳಿಕೆ ಕಂಡುಬಂದಿದೆ.

ಆರ್ಥಿಕ ಕುಸಿತಕ್ಕೆ ಇನ್ನೊಂದು ಉದಾಹರಣೆ ವಿದ್ಯುತ್ ಬೇಡಿಕೆಯಲ್ಲಾದ ಇಳಿಕೆ. 2019ರ ಅಕ್ಟೋಬರ್ ನಲ್ಲಿ ಶೇ. 13.2ರಷ್ಟು ವಿದ್ಯುತ್ ಶಕ್ತಿ ಬೇಡಿಕೆ ಇಳಿಕೆಯಾಗಿತ್ತು. ಇದು 154 ತಿಂಗಳಲ್ಲೇ ಅತ್ಯಧಿಕ ಇಳಿಕೆಯಾಗಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!