ಪುತ್ತೂರು | ಪೊಲೀಸರು ವಶಪಡಿಸಿಕೊಂಡಿದ್ದ ಹಸು, ಕರುವನ್ನು ಆರೋಪಿಗೆ ಹಿಂದಿರುಗಿಸುವಂತೆ ಕೋರ್ಟ್ ಆದೇಶ

Prasthutha|

ಪುತ್ತೂರು : ಅಕ್ರಮ ಗೋ ಸಾಗಾಟದ ಆರೋಪ ಹೊರಿಸಿ, ಪೊಲೀಸರು ವಶಪಡಿಸಿಕೊಂಡಿದ್ದ ಹಸು ಮತ್ತು ಕರುವನ್ನು ಆರೋಪಿಗೇ ಹಿಂದಿರುಗಿಸುವಂತೆ ನ್ಯಾಯಾಲಯ ತೀರ್ಪು ನೀಡಿದೆ. ಸಂಪ್ಯ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಹಸು, ಕರುಗಳನ್ನು ಹಿಂದಕ್ಕೆ ಒಪ್ಪಿಸುವಂತೆ ಪುತ್ತೂರು ನ್ಯಾಯಾಲಯ ಆದೇಶಿಸಿದೆ.

ಇರ್ದೆ ಗ್ರಾಮದ ಚೆಲ್ಯಡ್ಕ ಎಂಬಲ್ಲಿ ಆ.20ರಂದು ಕಾರೊಂದರಲ್ಲಿ ಹಸು ಮತ್ತು ಕರುವನ್ನು ಆರೋಪಿಗಳು ಕೊಂಡೊಯ್ಯುತ್ತಿದ್ದರು. ಈ ವೇಳೆ ಅಕ್ರಮ ಗೋ ಸಾಗಾಟ ಮಾಡುತ್ತಿದ್ದಾರೆ ಎಂದು ಆಪಾದಿಸಿ ಸಂಪ್ಯ ಪೊಲೀಸರು ಗುಮ್ಮಟಗದ್ದೆ ನಿವಾಸಿ ಬಾಲಕೃಷ್ಣ ಗೌಡ ಮತ್ತು ಆರ್ಲಪದವು ನಿವಾಸಿ ಮೂಸಾ ಎಂಬವರನ್ನು ಬಂಧಿಸಿದ್ದರು. ಅಲ್ಲದೆ, ಹಸು ಮತ್ತು ಕರು ಹಾಗೂ ಕಾರನ್ನು ವಶಕ್ಕೆ ಪಡೆದಿದ್ದರು.

- Advertisement -

ಇದಾದ ಬಳಿಕ, ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ನಂತರ ತಮಗೆ ಹಸು ಮತ್ತು ಕರು ಹಿಂದೆ ನೀಡಬೇಕು ಎಂದು ನ್ಯಾಯವಾದಿ ಎಂ. ರಮ್ಲತ್ ಮೂಲಕ ಪುತ್ತೂರು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೂಸಾ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಮೂಸಾ ಅವರ ಅರ್ಜಿಯನ್ನು ಪುರಸ್ಕರಿಸಿ, ಆದೇಶ ನೀಡಿದ್ದು, ಹಸು , ಕರು ಅರ್ಜಿದಾರರಿಗೆ ಹಿಂದಿರುಗಿಸುವಂತೆ ನಿರ್ದೇಶಿಸಿದೆ.

- Advertisement -