ಜಕಾರ್ತ : ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪದಿಂದ ಸಾವಿಗೀಡಾದವರ ಸಂಖ್ಯೆ 35ಕ್ಕೇರಿದೆ. ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಕಂಪನ ದಾಖಲಾಗಿದ್ದು, ಕುಸಿದ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದ ಜನರ ರಕ್ಷಣೆಗಾಗಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ಸದ್ಯಕ್ಕೆ 35 ಮಂದಿ ಸಾವಿಗೀಡಾದ ಮಾಹಿತಿ ದೊರಕಿದೆ. 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಂಪನದಿಂದ ಆಸ್ಪತ್ರೆಯೊಂದು ಕುಸಿದು ಬಿದ್ದಿದ್ದು, ಅದರಡಿಯಲ್ಲಿ ಅನೇಕರು ಸಿಲುಕಿದ್ದಾರೆ ಎಂದು ವರದಿಯಾಗಿದೆ.