ಇಟಾನಗರ: ಭಾರತದೊಂದಿಗೆ ಇತ್ತೀಚೆಗೆ ನಿರಂತರವಾಗಿ ಗಡಿ ವಿವಾದ ಹುಟ್ಟುಹಾಕುತ್ತಿರುವ ಚೀನಾ, ಅರುಣಾಚಲ ಪ್ರದೇಶದ 17ರ ಹರೆಯದ ಬಾಲಕನನ್ನು ಏಕಾಏಕಿ ಅಪಹರಿಸಿದೆ. ರಾಜ್ಯ ಸಂಸದ ತಪಿರ್ ಗಾವೊ ಸುದ್ದಿ ಸಂಸ್ಥೆ ಪಿಟಿಐಗೆ ಈ ಮಾಹಿತಿ ನೀಡಿದ್ದಾರೆ.
ಮಂಗಳವಾರ ಸಿಂಗಲಾ ಪ್ರದೇಶದ ಲುಂಗ್ಟಾ ಜೋರ್ ಪ್ರದೇಶದಿಂದ ಬಾಲಕನ ಅಪಹರಣ ನಡೆದಿದೆ. ಚೀನಾ ಈ ಹಿಂದೆಯೂ ಇಂತಹದೊಂದು ಕೆಲಸ ಮಾಡಿದೆ. ಚೀನೀ ಪಿಎಲ್ ಎ ಸೆಪ್ಟೆಂಬರ್ 2020 ರಲ್ಲಿ ಅರುಣಾಚಲ ಪ್ರದೇಶದ ಮೇಲ್ ಸುಬಾನ್ಸಿರಿ ಜಿಲ್ಲೆಯ ಐದು ಯುವಕರನ್ನು ಅಪಹರಿಸಿ, ಅವರನ್ನು ಒಂದು ವಾರದ ನಂತರ ಬಿಡುಗಡೆ ಮಾಡಿತ್ತು.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್ಎ) ಈ ಕೃತ್ಯ ಬುಧವಾರ ಬಹಿರಂಗವಾಗಿದೆ. ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಿಂದ ಅಪಹರಣಕ್ಕೊಳಗಾದ ಈ ಬಾಲಕನ ಬಗ್ಗೆ ರಾಜ್ಯ ಸಂಸದ ತಪಿರ್ ಗಾವೊ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಬಾಲಕನನ್ನು ಮಿರಾಮ್ ಟ್ಯಾರೋನ್ ಎಂದು ಗುರುತಿಸಲಾಗಿದೆ. ಲೋವರ್ ಸುಬನ್ಸಿರಿ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಜಿರೋದಿಂದ ಗಾವೊ ಅವರು ಸುದ್ದಿ ಸಂಸ್ಥೆ ಹಾಗೂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಅರುಣಾಚಲ ಪ್ರದೇಶದಲ್ಲಿ ತ್ಸಾಂಗ್ಪೋ ನದಿ ಭಾರತವನ್ನು ಪ್ರವೇಶಿಸುವ ಸ್ಥಳದಿಂದ ಈ ಘಟನೆ ನಡೆದಿದೆ.