ಟಿವಿ ಚರ್ಚಾ ಕಾರ್ಯಕ್ರಮದ ಮಧ್ಯೆ ‘ಡ್ಯಾನ್ಸ್’ ಮಾಡಿದ ಅತಿಥಿ!

Prasthutha|

ನವದೆಹಲಿ: ಸಂಜೆಯಾದರೆ ಪ್ರತಿನಿತ್ಯ ಬಹುತೇಕ ಎಲ್ಲಾ ಭಾಷೆಗಳ ನ್ಯೂಸ್ ಚಾನೆಲ್’ಗಳಲ್ಲೂ ಚರ್ಚಾ ಕಾರ್ಯಕ್ರಮಗಳನ್ನು ನೋಡಬಹುದು. ಇತ್ತೀಚಿನ ದಿನಗಳಲ್ಲಿ ಈ ಚರ್ಚಾ ಕಾರ್ಯಕ್ರಮಗಳು ತಮ್ಮ ಮಹತ್ವವನ್ನೇ ಕಳೆದುಕೊಳ್ಳುತ್ತಿವೆ. ವಿಷಯದ ಮೇಲಿನ ಚರ್ಚೆಗಳಿಗಿಂತಲೂ ಹೆಚ್ಚಾಗಿ ವೈಯಕ್ತಿಕ ಟೀಕೆಗಳು, ಕೆಲವೊಮ್ಮೆ ಸ್ಟುಡಿಯೋದಲ್ಲೇ ಹೊಡೆದಾಟಗಳು ಕೂಡ ನಡೆಯುತ್ತಿವೆ.

- Advertisement -

ಬಂಗಾಳಿ ಟಿವಿ ಚಾನೆಲ್’ವೊಂದರಲ್ಲಿ ನಡೆದ ಚರ್ಚಾ ಕಾರ್ಯಕ್ರಮದ ಸಣ್ಣ ವೀಡಿಯೋ ಕ್ಲಿಪ್’ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು ತನಗೆ ಮಾತನಾಡಲು ಅವಕಾಶ ನೀಡುವಂತೆ ಪದೇ ಪದೇ ಮನವಿ ಮಾಡುತ್ತಾಳೆ. ಆದರೆ ನಿರೂಪಕಿ ಹಾಗೂ ಉಳಿದ ಅತಿಥಿಗಳು ತಮ್ಮ ಮಾತು ಮುಂದುವರಿಸುತ್ತಲೇ ಇದ್ದುದರಿಂದ ತಾಳ್ಮೆ ಕಳೆದುಕೊಂಡ ಮಹಿಳೆ ಕುಳಿತಲ್ಲಿಯೇ ಡ್ಯಾನ್ಸ್ ಮಾಡಲು ಆರಂಭಿಸುತ್ತಾಳೆ. ಈ ದೃಶ್ಯವು ಇದೀಗ ಫುಲ್ ವೈರಲ್ ಆಗಿದೆ. ವೀಡಿಯೋದ ಕೆಳಗಡೆ ಸಾಕಷ್ಟು ಮಂದಿ ಹಾಸ್ಯಭರಿತವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

Join Whatsapp