ಭಾರತದ ನಗರ ನಿರುದ್ಯೋಗ ದರ ಪಾತಾಳಕ್ಕೆ: 4 ವರ್ಷಗಳಲ್ಲಿ ಗಣನೀಯ ಇಳಿಕೆ; NSO ಸಮೀಕ್ಷೆ

Prasthutha|

ನವದೆಹಲಿ: ಏಪ್ರಿಲ್-ಜೂನ್ 2022 ತೈಮಾಸಿಕ ಅವಧಿಯಲ್ಲಿ ಭಾರತದ ನಗರ ನಿರುದ್ಯೋಗ ದರವು ಶೇಕಡಾ 7.6 ಇಳಿಕೆಯಾಗಿರುವುದು ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (NSO) ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಇದು ಕಳೆದ 4 ವರ್ಷಗಳಲ್ಲೇ ದಾಖಲೆಯ ಇಳಿಕೆಯಾಗಿದೆ.

- Advertisement -

15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳ ನಗರ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣವು ಏಪ್ರಿಲ್ – ಜೂನ್ 2021ರ ತ್ರೈಮಾಸಿಕದಲ್ಲಿ ಶೇಕಡಾ 12.6 ರಷ್ಟಿತ್ತು. ಕಳೆದ ನಾಲ್ಕು ತ್ರೈಮಾನಿಕಗಳಲ್ಲಿ ಇದು ಸತತವಾಗಿ ಕುಸಿತ ಕಂಡಿದೆ.

2021ರ ಜುಲೈ – ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಗರ ನಿರುದ್ಯೋಗ ದರವು ಶೇಕಡಾ 9.8 ಇತ್ತು. ಇದು 2021ರ ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿ 8.7ಕ್ಕೆ ಕುಸಿಯಿತು ಮತ್ತು 2022ರ ಜನವರಿ- ಮಾರ್ಚ್ ತ್ರೈಮಾಸಿಕದಲ್ಲಿ 8.2 ಶೇಕಡಾಕ್ಕೆ ಇಳಿಯಿತು.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದರ ಪ್ರಮಾಣವು ಶೇಕಡಾ 7.6ಕ್ಕೆ ಇಳಿದಿದ್ದು, ಇದು ನಾಲ್ಕನೇ ತ್ರೈಮಾಸಿಕದಲ್ಲಿ ದಾಖಲೆಯ ಅಂತರದಲ್ಲಿ ಕುಸಿತ ಕಂಡಿದೆ.

- Advertisement -

2022 ರ ಏಪ್ರಿಲ್ – ಜೂನ್ ತ್ರೈಮಾಸಿಕದಲ್ಲಿ ನಗರ ಪ್ರದೇಶಗಳಲ್ಲಿ ರಾಷ್ಟ್ರಮಟ್ಟದಲ್ಲಿ ಒಟ್ಟು 5,721 ಬ್ಲಾಕ್’ಗಳು ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಮಾಡಲಾದ ನಗರದ ಒಟ್ಟು ಕುಟುಂಬಗಳ ಸಂಖ್ಯೆ 44,660 ಮತ್ತು ಸಮೀಕ್ಷೆ ಒಳಗಾದ ವ್ಯಕ್ತಿಗಳ ಸಂಖ್ಯೆ 1,73, 271 ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.



Join Whatsapp