ಮಂಗಳೂರು: ಮೋದಿ ಕಾರ್ಯಕ್ರಮದಲ್ಲಿ ಅಯ್ಯಪ್ಪ ಭಕ್ತರಿಗೆ ನೋ ಎಂಟ್ರಿ !

Prasthutha|

ಮಂಗಳೂರು: ಪ್ರಧಾನಿ ಮೋದಿ ಕಾರ್ಯಕ್ರಮ ನಡೆಯಲಿರುವ ಗೋಲ್ಡ್ ಫಿಂಚ್ ಸಿಟಿ ಮೈದಾನ ಪ್ರವೇಶ ಮಾಡದಂತೆ ಅಯ್ಯಪ್ಪ ಭಕ್ತರನ್ನು ಪೊಲೀಸರು ತಡೆದು ವಾಪಸ್ ಕಳುಹಿಸುತ್ತಿದ್ದಾರೆ.

- Advertisement -

ಕಪ್ಪು ಬಣ್ಣದ ಅಂಗಿ ಹಾಕಿ ಬರಬಾರದು ಎಂದು ಪೊಲೀಸರು ವಿಧಿಸಿರುವ ನಿಯಮದ ಅರಿವಿಲ್ಲದ ಅಯ್ಯಪ್ಪ ಭಕ್ತರು ಸೇರಿ ಹಲವು ಯುವಕರು, ಹಿರಿಯರು ಕಪ್ಪು ಟೀ ಶರ್ಟ್, ಶರ್ಟ್ ಧರಿಸಿ ಬಂದಿದ್ದರು.


ಪ್ರವೇಶ ದ್ವಾರದಲ್ಲೇ ಅವರನ್ನು ವಾಪಸ್ ಕಳಿಸಲಾಗುತ್ತಿದ್ದು, ಹಲವರು ದಿಕ್ಕು ತೋಚದೆ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದಾರೆ.
ಸಿಗರೇಟ್, ಲೈಟರ್, ಬೆಂಕಿಪೊಟ್ಟಣ, ಎಲೆ-ಅಡಿಕೆ, ಸುಣ್ಣ ಇಂತಹ ಯಾವುದೇ ವಸ್ತುಗಳನ್ನು ಒಳಗೆ ಕೊಂಡೊಯ್ಯುವಂತಿಲ್ಲ ಎಂದು ಪೊಲೀಸರು ತಿಳಿಸುತ್ತಿದ್ದಾರೆ.



Join Whatsapp