ಭಾರತದಲ್ಲಿ ನಿರುದ್ಯೋಗ ಪ್ರಮಾಣ ಶೇ.8.3ಕ್ಕೇರಿಕೆ: CMIE ವರದಿ

Prasthutha|

ಹೊಸದಿಲ್ಲಿ: ಭಾರತದಲ್ಲಿ ನಿರುದ್ಯೋಗ ಪ್ರಮಾಣ ಶೇ.8.3ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (CMIE) ವರದಿ ಮಾಡಿದೆ.

- Advertisement -

ಕಳೆದ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಶೇ.8.3ಕ್ಕೆ ಏರಿಕೆಯಾಗಿದೆ. ನವೆಂಬರ್‌ ತಿಂಗಳಲ್ಲಿ ದೇಶದ ನಗರ ಪ್ರದೇಶಗಳಲ್ಲಿ ನಿರುದ್ಯೋಗವು ಶೇ.8.96ರಷ್ಟಿತ್ತು. ಡಿಸೆಂಬರ್‌ನಲ್ಲಿ ಅದು ಶೇ.10.09ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣವು ನವೆಂಬರ್‌ನಲ್ಲಿ ಶೇ.7.55 ಇದ್ದಿದ್ದು, ಡಿಸೆಂಬರ್‌ ಗೆ ಶೇ.7.44ಕ್ಕೆ ಇಳಿಕೆಯಾಗಿದೆ.

ರೂಪಾಯಿ ಮೌಲ್ಯ ಕುಸಿತ

- Advertisement -

ಡಾಲರ್‌ ಎದುರು ರೂಪಾಯಿ ಮೌಲ್ಯ ಕಳೆದ ವರ್ಷ ಶೇ.11ರಷ್ಟು ಕುಸಿತ ಕಂಡಿದ್ದು, ಏಷ್ಯಾದ ಕರೆನ್ಸಿಗಳ ಪೈಕಿ ಅತೀ ಹೆಚ್ಚು ಕುಸಿತ ದಾಖಲಿಸಿದ ಕರೆನ್ಸಿ ಎಂಬ ಕುಖ್ಯಾತಿಗೂ ರೂಪಾಯಿ ಪಾತ್ರವಾಗಿದೆ. 2021ರ ಅಂತ್ಯದಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 74.29 ರೂ. ಆಗಿತ್ತು. 2022ರ ಡಿಸೆಂಬರ್‌ ಅಂತ್ಯಕ್ಕೆ ಇದು 82.61 ರೂ. ಆಗಿದೆ.



Join Whatsapp