ಹೊಸದಿಲ್ಲಿ: ಭಾರತದಾದ್ಯಂತ ಜಾರಿಯಲ್ಲಿರುವ UAPA ಕಾನೂನು ಭಯ ಹುಟ್ಟಿಸುವಂತಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಮಿಶೆಲ್ ಬ್ಯಾಶೆಲೆಟ್ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿ ಹೆಚ್ಚು ಜನರಿಗೆ UAPA ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪತ್ರಕರ್ತರನ್ನು ಸೆರೆಮನೆಗೆ ತಳ್ಳುವ ಭಾರತದ ಕಾನೂನಿನ ಬಗ್ಗೆ ಬ್ಯಾಶೆಲೆಟ್ ಕಳವಳ ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ನಿರ್ಬಂಧಗಳು ಮತ್ತು ಸಂವಹನದ ಮೇಲಿನ ನಿಷೇಧಗಳು ಮುಂದುವರಿದಿದ್ದು, ಪತ್ರಕರ್ತರು ಒತ್ತಡದಲ್ಲಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮೇಲಿನ ನಿರ್ಬಂಧಗಳು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ, ಮತ್ತಷ್ಟು ಅಶಾಂತಿ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.