ಏಕಕಾಲದಲ್ಲಿ ನಾಲ್ವರು ಗೆಳತಿಯರಿಂದ ಮನೆಗೆ ‘ದಾಳಿ’: ಪ್ರಿಯತಮ ಮಾಡಿದ್ದೇನು ಗೊತ್ತಾ ?

Prasthutha|

ಕೂಚ್ ಬೆಹಾರ್:  ಎರಡು ದೋಣಿಯಲ್ಲಿ ಕಾಲಿಟ್ಟ ಅಥವಾ ಏಕಕಾಲದಲ್ಲಿ ಇಬ್ಬರನ್ನು ಪ್ರೀತಿಸಿ ಪಜೀತಿಗೆ ಸಿಲುಕಿರುವ ಆನೇಕ ಘಟನೆಗಳನ್ನು ಕೇಳಿರುತ್ತೀರಿ. ಆದರೆ ಪಶ್ಚಿಮ ಬಂಗಾಳದ ಸುರ ಸುಂದರನೋರ್ವ ಏಕಾಕಲದಲ್ಲಿ ನಾಲ್ವರು ಯುವತಿಯರೊಂದಿಗೆ ಡೇಟಿಂಗ್ ನಡೆಸಿ ತನ್ನದೇ ಮನೆಯಲ್ಲಿ ನಾಲ್ವರ ಕೈಗೆ ಸಿಕ್ಕಿಬಿದ್ದಿದ್ದಾನೆ.

- Advertisement -

ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ಜೋರ್’ಪಟ್ಕಿ ಗ್ರಾಮದ ಸುಭಾಮೋಯ್ ಕರ್ ಎಂಬಾತ ಒಬ್ಬರು ಒಬ್ಬಾಕೆ-ಇಬ್ಬರು ಸಾಲದೆಂಬಂತೆ ಏಕಕಾಲದಲ್ಲಿ ನಾಲ್ವರು ಯುವತಿಯರೊಂದಿಗೆ ಲವ್ವಿ-ಡವ್ವಿ ಇಟ್ಟುಕೊಂಡಿದ್ದ. ಒಬ್ಬರಿಗೊಬ್ಬರಿಗೆ ಗೊತ್ತಾಗದಂತೆ ನಾಲ್ವರನ್ನೂ ಸಂಭಾಳಿಸಿಕೊಂಡು ಹೋಗುತ್ತಿದ್ದ.

ಮೆಡಿಕಲ್ ಸ್ಟೋರ್’ನಲ್ಲಿ ಕೆಲಸ ಮಾಡುತ್ತಿದ್ದ ಸುಭಾಮೋಯ್ ಕರ್ ಗ್ರಹಚಾರ ಕಳೆದ ದಿನ ನೆಟ್ಟಗಿರಲಿಲ್ಲ. ಈತನ ‘ಇತಿಹಾಸ’ ನಾಲ್ವರು ಯುವತಿಯರಿಗೂ ಗೊತ್ತಾಗಿದೆ. ನಾಲ್ವರು ಒಗ್ಗಟ್ಟಾಗಿ ಈತನ ಮನೆಗೆ ದಾಳಿ ನಡೆಸಿದ್ದಾರೆ. ತಾನು ಗುಟ್ಟಾಗಿ ಪ್ರೇಮಿಸುತ್ತಿದ್ದ ನಾಲ್ವರು ಒಟ್ಟಾಗಿ ಮನೆಗೆ ಬಂದಿರುವುದನ್ನು ನೋಡಿ ಸುಭಾಮೋಯ್ ಕರ್ ಶಾಕ್ ಆಗಿದ್ದಾನೆ. ಏನು ಮಾಡಬೇಕು ಎಂದು ತೋಚದೆ ಕುಳಿತಿರುವಾಗ ಯುವತಿಯರು ಆತನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

- Advertisement -

ಸಮಜಾಯಿಷಿ ನೀಡಲು ಸುಭಾಮೋಯ್ ಕರ್ ಪ್ರಯತ್ನಿಸಿದರೂ ಯುವತಿಯರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ತನ್ನ ಕೊಠಡಿಗೆ ತೆರಳಿದ ಸುಭಾಮೋಯ್ ಕರ್ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಗಲಾಟೆ ಕೇಳಿ ಓಡಿಬಂದ ಪಕ್ಕದ ಮನೆಯವರು ಸುಭಾಮೋಯ್ ಕರ್’ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Join Whatsapp