ಕೊಚ್ಚಿ: ಭಾರತದ ಮೊಟ್ಟಮೊದಲ ಜಲ ಮೆಟ್ರೋ ಸೇವೆ ಕೊಚ್ಚಿಯಲ್ಲಿ ಇಂದಿನಿಂದ ಆರಂಭಗೊಂಡಿತು.
ಟಿಕೆಟ್ ದರಗಳು ಕನಿಷ್ಟ ರೂ. 20 ರಿಂದ ಹಿಡಿದು ಗರಿಷ್ಟ ರೂ. 40ರವರೆಗೆ ನಿಗದಿಪಡಿಸಲಾಗಿದೆ. ರೆಗ್ಯುಲರ್ ಪ್ರಯಾಣಿಕರು ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳನ್ನು ಪಡೆದುಕೊಳ್ಳಬಹುದಾಗಿದ್ದು ಇವುಗಳ ದರ ರೂ. 180 ರಿಂದ ಮೊದಲುಗೊಂಡು ರೂ. 1,500 ವರೆಗೆ ಇದೆ. ಪ್ರಯಾಣಿಕರು ಕೊಚ್ಚಿ ವನ್ ಕಾರ್ಡ್ ಖರೀದಿಸಿ ಕೊಚ್ಚಿ ಮೆಟ್ರೋ ರೇಲ್ ಮತ್ತು ಜಲ ಮೆಟ್ರೋ ಎರಡರಲ್ಲೂ ಪ್ರಯಾಣಿಸಬಹುದಾಗಿದೆ.
ಜಲ ಮೆಟ್ರೋ ನಿಲ್ದಾಣ ಮತ್ತು ಬೋಟ್ ಗಳನ್ನು ವಿಶೇಷ ಚೇತನರೂ ಸುಲಭವಾಗಿ ಉಪಯೋಗಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ದೊಡ್ಡ ಅಲೆಗಳು ಎದ್ದಾಗ ಇಲ್ಲವೇ ಚಿಕ್ಕ ಚಿಕ್ಕ ಅಲೆಗಳು ಏಳುವಾಗ ಪ್ರಯಾಣಿಕರು ನಾವೆಯಲ್ಲಿ ಹತ್ತಲು ಮತ್ತು ಇಳಿಯಲು ಯಾವ ಸಮಸ್ಯೆಯೂ ಉಂಟಾಗದ ಹಾಗೆ ಜಲ ಮೆಟ್ರೋ ನಿಲ್ದಾಣಗಳನ್ನು ವಿನ್ಯಾಸ ಮಾಡಲಾಗಿದೆ.