ಕೊಟ್ಟಿಗೆಹಾರ: ಚುನಾವಣೆಯ ತಂಡ (ಫ್ಲೈಯಿಂಗ್ ಸ್ಕ್ವಾಡ್) ಗಸ್ತು ತಿರುಗುತ್ತಿದ್ದ ವೇಳೆ ಬಣಕಲ್ ನಿಂದ ಮತ್ತಿಕಟ್ಟೆ ರಸ್ತೆಯಲ್ಲಿ ಖಾಸಗಿ ಶಾಲೆಯ ಸಮೀಪ ಸಾಗುತ್ತಿದ್ದ ದ್ವಿಚಕ್ರ ವಾಹನವನ್ನು ತಪಾಸಣೆಗೊಳಿಸಿದಾಗ ದಾಖಲೆಯಿಲ್ಲದ 17 ಲೀಟರ್ ಮದ್ಯವನ್ನು ಮಾಲು ಸಮೇತ ವಶಪಡಿಸಿ ಆರೋಪಿಯನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಚುನಾವಣಾ ಕಾರ್ಯಾಚರಣೆಯ ತಂಡದ ಮುಖ್ಯಸ್ಥ ಕೆ.ವಾಸುದೇವ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ತಂಡದ ವಾಸುದೇವ್, ಸದಸ್ಯರಾದ ಬಿ.ಟಿ.ಪ್ರಸಾದ್,ಪೊಲೀಸ್ ಸಿಬ್ಬಂದಿ ಸತೀಶ್, ವೀಡಿಯೊ ಗ್ರಾಫರ್ ಕೆ.ಎಂ.ವಾಸುದೇವ್, ಚಾಲಕ ಸತೀಶ್ ಭಾಗವಹಿಸಿದ್ದರು.
ಮದ್ಯವನ್ನು ಬಣಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.