ಪ್ಯಾರಾ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ

Prasthutha|

ಹಾಂಗ್‌ಝೌ : ಪ್ಯಾರಾ ಏಷ್ಯನ್‌ ಕ್ರೀಡಾಕೂಟದ ಕೆನೊಯಿಂಗ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಗೌರವಕ್ಕೆ ಪ್ರಾಚಿ ಯಾದವ್ ಪಾತ್ರರಾಗಿದ್ದಾರೆ. ಮಂಗಳವಾರ ನಡೆದ ಮಹಿಳೆಯರ ಕೆಎಲ್‌2 ವಿಭಾಗದಲ್ಲಿ ಅವರು ಅಗ್ರಸ್ಥಾನ ಪಡೆದಿದ್ದಾರೆ. ಸೋಮವಾರ ನಡೆದಿದ್ದ ವಿಎಲ್‌2 ಸ್ಪರ್ಧೆಯಲ್ಲಿಯೂ ಅವರು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು.

- Advertisement -

ದೀಪ್ತಿ ಜೀವಾಂಜಿ ಮಹಿಳೆಯರ 400ಮೀ. ಓಟದಲ್ಲಿ ಹಾಗೂ ನೀರಜ್‌ ಯಾದವ್‌ ಪುರುಷರ ಡಿಸ್ಕಸ್‌ ಥ್ರೊದಲ್ಲಿ ಮಂಗಳವಾರ ಚಿನ್ನ ಗೆದ್ದ ಭಾರತದ ಇತರ ಕ್ರೀಡಾಪಟುಗಳು.

ಭಾರತ 9 ಚಿನ್ನ, 12 ಬೆಳ್ಳಿ ಮತ್ತು 13 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದು,  ಒಟ್ಟು 34 ಪದಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿ 165 ಪದಕಗಳನ್ನು ಜಯಿಸಿರುವ ಚೀನಾ ಇದ್ದರೆ, ಇರಾನ್‌ (47), ಜಪಾನ್‌ (45) ಮತ್ತು ಉಜ್ಬೆಕಿಸ್ತಾನ (38) ಬಳಿಕದ ಸ್ಥಾನಗಳಲ್ಲಿವೆ.

Join Whatsapp