ಭಾರತದ ಅತೀ ದೊಡ್ಡ ಪಪ್ಪು’ : ಅಮಿತ್ ಶಾ ಅಣಕಿಸಿ ಟಿ-ಶರ್ಟ್ ವಿನ್ಯಾಸಗೊಳಿಸಿದ ತೃಣಮೂಲ ಕಾಂಗ್ರೆಸ್

Prasthutha|

ಕೊಲ್ಕತ್ತಾ: ತನ್ನ ರಾಜಕೀಯ ಎದುರಾಳಿ ಕೇಂದ್ರ ಗೃಹಸಚಿವ, ಬಿಜೆಪಿ ನಾಯಕ ಅಮಿತ್‌ ಶಾ ಅವರನ್ನು ಅಣಕ ಮಾಡುವ ಸಲುವಾಗಿ ತೃಣಮೂಲ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗಾಗಿ ಟಿ- ಶರ್ಟ್ ಒಂದನ್ನು ವಿನ್ಯಾಸಗೊಳಿಸಿದೆ.

- Advertisement -

ಟಿ- ಶರ್ಟ್‌ ಮುಂಭಾಗದಲ್ಲಿ ಅಮಿತ್ ಶಾ ಅವರ ಮುಖದ ಕಾರ್ಟೂನ್ ಫೋಟೊ ಇದ್ದು, ಅದರ ಕೆಳಭಾಗದಲ್ಲಿ ‘ಭಾರತದ ಅತೀ ದೊಡ್ಡ ಪಪ್ಪು’ ಎಂದು ಬರೆಯಲಾಗಿದೆ. ಬಿಳಿ, ಕಪ್ಪು ಮತ್ತು ಹಳದಿ ಬಣ್ಣದಲ್ಲಿ ಈ ಟಿ-ಶರ್ಟ್‌ನ್ನು ಬಿಡುಗಡೆಗೊಳಿಸಲಾಗಿದೆ.

ಬಿಜೆಪಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ “ಪಪ್ಪು” ಎಂಬ ವಿಶೇಷಣ ನೀಡಿತ್ತು. ಆದರೆ ಇದನ್ನು ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಈಗ ಅಮಿತ್ ಷಾ ಅವರನ್ನೇ ಅಪಹಾಸ್ಯ ಮಾಡಲು ಬಳಸುತ್ತಿದೆ.

- Advertisement -

ಅಕ್ಟೋಬರ್ ಮೊದಲ ವಾರದಲ್ಲಿ ನಡೆಯುವ ದುರ್ಗಾ ಪೂಜೆಯ ಸಮಯದಲ್ಲಿ ತಮ್ಮ ಕಾರ್ಯಕರ್ತರಿಗೆ ಈ ಟಿ-ಶರ್ಟ್ ನೀಡಲು ತೃಣಮೂಲ ಕಾಂಗ್ರೆಸ್ ಯೋಜನೆ ರೂಪಿಸಿದ್ದು, ಈ ಸಂದರ್ಭದಲ್ಲಿ ಇದು ಹೆಚ್ಚು ಪ್ರಚಾರ ಪಡೆಯಬಹುದೆಂಬ ನಿರೀಕ್ಷೆಯಲ್ಲಿದೆ.

ಅಪಹಾಸ್ಯವು ಸಂವಹನದ ಅತ್ಯಂತ ಶಕ್ತಿಯುತ ರೂಪವಾಗಿದೆ. ಇದು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮಾಡಿದ ಕಾಮೆಂಟ್‌ನಿಂದ ಪ್ರಾರಂಭವಾಯಿತು ಮತ್ತು ಅದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಯಿತು. ನಂತರ ಅದು ಟಿ-ಶರ್ಟ್‌ಗಳ ಮೇಲೆ ಬಂದಿತು” ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಪಿಟಿಐಗೆ ತಿಳಿಸಿದ್ದಾರೆ.

Join Whatsapp